Job Description: * ಭಾರತ ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಿಂದಾಗಿ ಭಾರತೀಯ ರೈಲ್ವೆ ತನ್ನ ಸುಮಾರು 4,000 ರೈಲು ಬೋಗಿಗಳನ್ನ ಕೋವಿಡ್ ಆರೈಕೆ ಘಟಕಗಳಾಗಿ ಪರಿವರ್ತಿಸಿದೆ ಮತ್ತು ರಾಜ್ಯಗಳು ಈ ಕೋವಿಡ್ ಆರೈಕೆ ಘಟಕಗಳ ಸುಮಾರು 64,000 ಹಾಸಿಗೆಗಳನ್ನ ಬಳಸಿಕೊಳ್ಳಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. * ಪ್ರಸ್ತುತ ಭಾರತೀಯ ರೈಲ್ವೆ ಕೋವಿಡ್ ಆರೈಕೆಗಾಗಿ 169 ಬೋಗಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಮಾಹಿತಿಯನ್ನು ನೀಡಿದೆ. ಭಾರತೀಯ ರೈಲ್ವೆ ಬಗ್ಗೆ ಮಾಹಿತಿ : * ಭಾರತೀಯ ರೈಲ್ವೆಯು ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಮಾಲೀಕತ್ವದ ಸರ್ಕಾರಿ ಸಂಸ್ಥೆಯಾಗಿದೆ. * ಇದು ಮಾರ್ಚ್ 31, 2020 ರ ವೇಳೆಗೆ 67,956 ಕಿ.ಮೀ ಉದ್ದವನ್ನು ಹೊಂದಿರುವ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವನ್ನು ಗಾತ್ರದಿಂದ ನಿರ್ವಹಿಸುತ್ತದೆ. * ಗ್ರಾಹಕ ಸೇವೆ ಸಂಖ್ಯೆ : 139 * ಸ್ಥಾಪನೆ: 16 ಏಪ್ರಿಲ್ 1853, ಭಾರತ * ಪ್ರಧಾನ ಕಚೇರಿ: ನವದೆಹಲಿ * ಪೋಷಕ ಸಂಸ್ಥೆ: ಭಾರತ ಸರ್ಕಾರ * ನೌಕರರ ಸಂಖ್ಯೆ: 13,08,000 (2016-2017) * ಅಂಗಸಂಸ್ಥೆಗಳು: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ,