Job Description: * ಭಾರತದಲ್ಲಿ ಕೋವಿಡ್-19 ವೈರಸ್ಸ್'ನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಫ್ರಾನ್ಸ್ ಸರ್ಕಾರದ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಭಾರತಕ್ಕೆ ಅತ್ಯಾಧುನಿಕ ವೆಂಟಿಲೇಟರ್ ಮತ್ತು ಹಲವು ವೈದ್ಯಕೀಯ ನೆರವು ನೀಡುವದಾಗಿ ಘೋಷಣೆ ಮಾಡಿದ್ದಾರೆ. * ಈ ಮೊದಲು ಅಮೆರಿಕ, ಬ್ರಿಟನ್ ದೇಶಗಳು ಭಾರತಕ್ಕೆ ನೆರವು ನೀಡುವದಾಗಿ ಭರವಸೆ ನೀಡಿದ್ದವು ಇದೀಗ ಫ್ರಾನ್ಸ್ ದೇಶವು ಕೂಡ ಭಾರತದ ಸಹಾಯಕ್ಕೆ ನಿಂತಿದೆ. * ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಭಾರತಕ್ಕೆ 8 ಆಮ್ಲಜನಕ ಉತ್ಪಾದನೆ ಮಾಡುವ ಪರಿಕರಗಳು, ಆಕ್ಸಿಜನ್ ಹಾಗೂ ದ್ರವೀಕೃತ ಆಮ್ಲಜನಕ ಇರುವ ಕಂಟೇನರ್ಗಳು, 200 ಎಲೆಕ್ಟ್ರಿಕ್ ಸಿರೆಂಜ್ ಪಂಪ್, ವೆಂಟಿಲೇಟರ್, ಕೃತಕ ಉಸಿರಾಟದ ಪರಿಕರಗಳು ಹಾಗೂ ಔಷಧಿ ಸಾಮಗ್ರಿಗಳನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. * ರಷ್ಯಾ ದೇಶದ ಸ್ಪುಟ್ನಿಕ್ ವಿ ಲಸಿಕೆಗಳು ಮೇ 1ರಂದು ಭಾರತಕ್ಕೆ ತಲುಪಲಿವೆ ಎಂದು ತಿಳಿಸಿದ್ದಾರೆ. * ಒಂದು ಡೋಸ್ ಸ್ಪುಟ್ನಿಕ್ ವಿ ಲಸಿಕೆಯ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10 ಡಾಲರ್ಗಿಂತ ಕಡಿಮೆ ಇದೆ ಎಂದು ತಿಳಿಸಿದ್ದಾರೆ. * ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಬ್ರೆಟ್ ಲೀ ಭಾರತದಲ್ಲಿ ಆಮ್ಲಜನಕ ಪೂರೈಕೆಗಾಗಿ ಕ್ರಿಪ್ಟೋ ಪರಿಹಾರ ನಿಧಿಗೆ ʼ41 ಲಕ್ಷʼ ದೇಣಿಗೆ ನೀಡಿದ್ದಾರೆ. * ಮತ್ತೊಬ್ಬ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಅವರು ಪಿಎಂ ಕೇರ್ಸ್ ಪರಿಹಾರ ನಿಧಿಗೆ 50,000 ಅಮೆರಿಕನ್ ಡಾಲರ್ ದೇಣಿಗೆ ನೀಡಿದ್ದಾರೆ. ಫ್ರಾನ್ಸ್ ಸರ್ಕಾರದ ಬಗ್ಗೆ ಮಾಹಿತಿ : * ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ. ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ. ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ. ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತಂಭತ್ತನೆಯ ಶತಮಾನ ಮತ್ತು 20ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು. * ಫ್ರಾನ್ಸ್ ಅಧಿಕೃತವಾಗಿ ರೇಪಬ್ಲೀಕ್ ಫ್ರಾನ್ಸೇಸ್. ಪಶ್ಚಿಮ ಯುರೋಪಿನ ಗಣರಾಜ್ಯ. * ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇಕೊಲ್ಲಿ, ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಮತ್ತು ಇಟಲಿ ಇವು ಇವೆ. * ಫ್ರಾನ್ಸ್ ಉತ್ತರ ದಕ್ಷಿಣವಾಗಿ 950 ಕಿ.ಮೀ. ಪೂರ್ವ ಪಶ್ವಿಮವಾಗಿ 974 ಕಿ.ಮೀ ಇದ್ದು ಒಟ್ಟು ವಿಸ್ತೀರ್ಣ 551,500 ಚ.ಕಿ.ಮೀ ಇದೆ. 3700 ಕಿ.ಮೀ ಉದ್ದ ಸಮುದ್ರ ತೀರ ಹೊಂದಿದೆ. 1990ರಲ್ಲಿ ಇಲ್ಲಿನ ಜನಸಂಖ್ಯೆ 56,634,299. * ರಾಜಧಾನಿ : ಪ್ಯಾರಿಸ್.