Job Description: * ಇತ್ತೀಚಿಗೆ ವಿಶ್ವ ಮಿಲಿಟರಿ ವೆಚ್ಚದ ವರದಿಯನ್ನು 'ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ(SIPRI)' ಬಿಡುಗಡೆ ಮಾಡಿದೆ. * SIPRI ವರದಿಯ ಪ್ರಕಾರ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಭಾರತ ದೇಶಗಳು ವಿಶ್ವದ ಅತಿ ಹೆಚ್ಚು ಮಿಲಿಟರಿ ಖರ್ಚು ಮಾಡುವ ದೇಶಗಳಾಗಿವೆ ಪ್ರಸ್ತುತ ಮೂರು ದೇಶಗಳು 62% ಜಾಗತಿಕ ಮಿಲಿಟರಿ ವೆಚ್ಚದ ವರದಿಯನ್ನು ನೀಡಿವೆ. * ಯುನೈಟೆಡ್ ಸ್ಟೇಟ್ಸ್ 2020ರಲ್ಲಿ ತನ್ನ ಮಿಲಿಟರಿಗಾಗಿ 778 ಬಿಲಿಯನ್ USD ಖರ್ಚು ಮಾಡಿದೆ ಎಂದು ಮಾಹಿತಿಯನ್ನು ನೀಡಿದೆ. * ಚೀನಾ 252 ಬಿಲಿಯನ್ USD ಖರ್ಚು ಮಾಡಿದೆ * ಭಾರತ 72.9 ಬಿಲಿಯನ್ USD ಖರ್ಚು ಮಾಡಿದೆ. * ಪ್ರಸ್ತುತ 2020ರ ಮಿಲಿಟರಿ ವೆಚ್ಚವು 2019ಕ್ಕೆ ಹೋಲಿಸಿದರೆ 1981ಬಿಲಿಯನ್ USD ಹೆಚ್ಚಾಗಿದೆ. SIPRI ಬಗ್ಗೆ ಮಾಹಿತಿ : * ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಟಾಕ್ಹೋಮ್ ಮೂಲದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದನ್ನು 1966 ರಲ್ಲಿ ಸ್ಥಾಪಿಸಲಾಯಿತು ಮತ್ತು ಸಶಸ್ತ್ರ ಸಂಘರ್ಷ, ಮಿಲಿಟರಿ ಖರ್ಚು ಮತ್ತು ಶಸ್ತ್ರಾಸ್ತ್ರ ವ್ಯಾಪಾರ ಮತ್ತು ನಿರಸ್ತ್ರೀಕರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣಕ್ಕಾಗಿ ಡೇಟಾ, ವಿಶ್ಲೇಷಣೆ ಮತ್ತು ಶಿಫಾರಸುಗಳನ್ನು ಒದಗಿಸುತ್ತದೆ. * ಸ್ಥಾಪನೆ: 6 ಮೇ 1966 * ನಿರ್ದೇಶಕ: ಡಾನ್ ಸ್ಮಿತ್ * ನಾಯಕ: ಡಾನ್ ಸ್ಮಿತ್ * ಪ್ರಧಾನ ಕಚೇರಿ: ಸೋಲ್ನಾ * ಸ್ಥಳ: ಸ್ಟಾಕ್ಹೋಮ್, ಸ್ವೀಡನ್ * ಸ್ಥಾಪಕರು: ಸ್ವೀಡನ್ ಸರ್ಕಾರ, ಟೇಜ್ ಎರ್ಲ್ಯಾಂಡರ್, ಅಲ್ವಾ ಮಿರ್ಡಾಲ್