Job Description: * ಓಲಾ ಇ ಸ್ಕೂಟರ್ ಇದೇ ವರ್ಷದ ಜುಲೈನಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆಗೊಳಿಸಿದೆ ಎಂದು ಓಲಾ ಎಲೆಕ್ಟ್ರಿಕ್ ಕಂಪನಿ ತಿಳಿಸಿದೆ, ಮತ್ತು 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ಪಾಯಿಂಟ್ಗಳ ಹೈಪರ್ ಚಾರ್ಜರ್ ನೆಟ್ವರ್ಕ್ ಸ್ಥಾಪಿಸಲಿದೆ ಓಲಾ ಎಲೆಕ್ಟ್ರಿಕ್ ಮಾಹಿತಿಯನ್ನು ನೀಡಿದೆ. * ಈ ಹಿಂದಿನ ವರ್ಷ ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆ ಪ್ರಾರಂಭಿಸಲಾಗಿದ್ದು, ಇದಕ್ಕೆ ಓಲಾ ಕಂಪನಿ 2400 ಕೋಟಿ ರೂ. ಬಂಡವಾಳ ಹೂಡಿದೆ ಮತ್ತು 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಲಿದೆ ಎನ್ನುವ ಭರವಸೆಯನ್ನು ನೀಡಿದೆ. * ಪ್ರಸ್ತುತ ಓಲಾ ಕಂಪನಿಯು 2 ಮಿಲಿಯನ್ ಸ್ಕೂಟರ್'ಗಳನ್ನೂ ತಯಾರಿಸುವ ಸಾಮರ್ಥ್ಯ ಹೊಂದಿದೆ, ಇದೇ ಜೂನ್ನಲ್ಲಿ ಕಾರ್ಖಾನೆ ಕಾರ್ಯ ಸಂಪೂರ್ಣಗೊಳ್ಳಲಿದೆ ಮತ್ತೇ ಜುಲೈ ತಿಂಗಳಿನಿಂದ ಸ್ಕೂಟರ್ಗಳನ್ನ ಮಾರಾಟ ಮಾಡಲು ಪ್ರಾರಂಭಿಸಲಿದೆ ಎಂದು ಓಲಾ ಚೇರ್ಮನ್ ಹಾಗೂ ಗ್ರೂಪ್ CEO ಭವಿಶ್ ಅಗರ್ವಾಲ್ ಮಾಹಿತಿಯನ್ನು ನೀಡಿದ್ದಾರೆ.