Job Description: * ಭಾರತೀಯ ಮೂಲದ ವನಿತಾ ಗುಪ್ತಾ ಅವರು ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ, ಭಾರತೀಯ ಮೂಲದ ಮೊದಲ ಮಹಿಳೆ ಅಟಾರ್ನಿ ಜನರಲ್ ಹುದ್ದೆಗೆ ನೇಮಕಗೊಂಡಿದ್ದಾರೆ. * ಸೆನೆಟ್ನಲ್ಲಿ ನಡೆದ ಮತದಾನದಲ್ಲಿ ವನಿತಾ ಗುಪ್ತಾ ಅವರು 51-49 ಮತಗಳ ಅಂತರದಿಂದ ಗೆದ್ದು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ. * ಅಮೇರಿಕ ಅಧ್ಯಕ್ಷ ಜೋ ಬೈಡನ್'ರವರು ಅಮೆರಿಕಾದ ಸಹ ಅಟಾರ್ನಿ ಜನರಲ್ ಆಯ್ಕೆಯಾಗಿರುವ ವನಿತಾ ಗುಪ್ತ ಅವರನ್ನು ಅಭಿನಂದಿಸಿರುವ 'ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ವನಿತಾ ಗುಪ್ತ ಮತ್ತು ಕ್ರಿಸ್ಟಿನ್ ಕ್ಲರ್ಕ್ ಅವರಿಗೆ ನೀಡಿದರು. * ಈ ಸಹ ಅಟಾರ್ನಿ ಜನರಲ್ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ 3ನೇ ಅತಿ ಪ್ರಮುಖ ಹುದ್ದೆಯಾಗಿದೆ, ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್ ಹುದ್ದೆ ಅತ್ಯಂತ ಪ್ರಮುಖವಾಗಿದೆ. * ವನಿತಾ ಗುಪ್ತಾ ಅವರು ಈ ಹಿಂದೆ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಸಮಯದಲ್ಲಿ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ವನಿತಾ ಗುಪ್ತಾ ರವರ ಬಗ್ಗೆ ಮಾಹಿತಿ : * ವನಿತಾ ಗುಪ್ತಾ ನವೆಂಬರ್ 15, 1974 ರಂದು ಜನಿಸಿದರು. * ಅಮೆರಿಕದ ನಾಗರಿಕ ಹಕ್ಕುಗಳ ವಕೀಲ ಅವರು ನಾಗರಿಕ ಮತ್ತು ಮಾನವ ಹಕ್ಕುಗಳ ನಾಯಕತ್ವ ಸಮ್ಮೇಳನದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. * 2014 ರಿಂದ 2017 ರವರೆಗೆ, ಅವರು ಯು.ಎಸ್. ನ್ಯಾಯಾಂಗ ಇಲಾಖೆಯಲ್ಲಿ ಪ್ರಧಾನ ಉಪ ಸಹಾಯಕ ಅಟಾರ್ನಿ ಜನರಲ್ ಮತ್ತು ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. * ಇವರು ಯುನೈಟೆಡ್ ಸ್ಟೇಟ್ಸ್ನ ಮುಖ್ಯ ನಾಗರಿಕ ಹಕ್ಕುಗಳ ಅಭಿಯೋಜಕರಾಗಿದ್ದರು. * ಜನವರಿ 7, 2021 ರಂದು, ಅಧ್ಯಕ್ಷ ಜೋ ಬಿಡನ್ ಅವರು ಗುಪ್ತಾ ಅವರನ್ನು ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದರು.