Job Description: * ಆಸ್ಟ್ರೇಲಿಯಾ ದೇಶದ ರಾಜ್ಯ ಸರ್ಕಾರವು ಚೀನಾ ದೇಶದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿತ್ತು ಇದೀಗ ಈ ಒಪ್ಪಂದಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂಬ ಹೇಳಿಕೆಯನ್ನು ನೀಡಿ ಆಸ್ಟ್ರೇಲಿಯಾ ಸರ್ಕಾರವು ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. * ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು 2018 ಮತ್ತು 2019ರಲ್ಲಿ ಚೀನಾದೊಂದಿಗೆ ಬೆಲ್ಟ್ ಆಯಂಡ್ ರೋಡ್ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗೆ ಸಹಿ ಹಾಕಲಾಗಿತ್ತು. * ರಾಜ್ಯದ ಶಿಕ್ಷಣ ಇಲಾಖೆಯು 1999ರಲ್ಲಿ ಸಿರಿಯಾ ಮತ್ತು 2004ರಲ್ಲಿ ಇರಾನ್ ಜತೆಗೂ ಒಪ್ಪಂದ ಮಾಡಿಕೊಂಡಿತ್ತು. * ಈ ನಾಲ್ಕೂ ಒಪ್ಪಂದಗಳು ಹೊಸ ಕಾನೂನುಗಳ ಅಡಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಭಂಗ ತರುತ್ತವೆ ಎಂಬ ಕಾರಣಗಳನ್ನು ತಿಳಿಸಿ ಈ ಒಪ್ಪಂದಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಆಸ್ಟ್ರೇಲಿಯಾ ಸರ್ಕಾರ ಬಂದಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೈನೆ ಮಾಹಿತಿಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ದೇಶದ ಬಗ್ಗೆ ಮಾಹಿತಿ : * ಆಸ್ಟ್ರೇಲಿಯಾ, ಅಧಿಕೃತವಾಗಿ ಆಸ್ಟ್ರೇಲಿಯಾದ ಕಾಮನ್ವೆಲ್ತ್, ಇದು ಆಸ್ಟ್ರೇಲಿಯಾ ಖಂಡದ ಮುಖ್ಯ ಭೂಭಾಗವಾಗಿದೆ. * ಟ್ಯಾಸ್ಮೆನಿಯಾ ದ್ವೀಪ ಮತ್ತು ಹಲವಾರು ಸಣ್ಣ ದ್ವೀಪಗಳನ್ನು ಒಳಗೊಂಡಿರುವ ಸಾರ್ವಭೌಮ ದೇಶವಾಗಿದೆ. * ಇದು ಓಷಿಯಾನಿಯಾದ ಅತಿದೊಡ್ಡ ದೇಶ ಮತ್ತು ಒಟ್ಟು ವಿಸ್ತೀರ್ಣದಿಂದ ವಿಶ್ವದ ಆರನೇ ಅತಿದೊಡ್ಡ ದೇಶವಾಗಿದೆ. * ಪ್ರಧಾನಿ: ಸ್ಕಾಟ್ ಮಾರಿಸನ್ ಟ್ರೆಂಡಿಂಗ್ * ರಾಜಧಾನಿ: ಕ್ಯಾನ್ಬೆರಾ * ಡಯಲಿಂಗ್ ಕೋಡ್: +61 * ಜನಸಂಖ್ಯೆ: 2.54 ಕೋಟಿ (2019) * ಕರೆನ್ಸಿ: ಆಸ್ಟ್ರೇಲಿಯಾದ ಡಾಲರ್