Job Description: * ಏಷಿಯಾ ಫೋರ್ಬ್ಸ್ ಅಂಡರ್ 30 ಉದ್ಯಮಿ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಏಷಿಯಾ ಫೋರ್ಬ್ಸ್ ಉದ್ಯಮವಲಯದಲ್ಲಿ ಸಾಧನೆ ಮಾಡಿರುವ 30ವರ್ಷ ಒಳಗಿನ ಯುವ ಪ್ರತಿಭೆಗಳನ್ನು ಗುರುತಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಪಟ್ಟಿಯಲ್ಲಿ ಬೆಂಗಳೂರಿನ ಯುವ ಉದ್ಯಮಿ ವಿಭಾ ಹರೀಶ್ ಅವರು ಆಯ್ಕೆಯಾಗಿದ್ದಾರೆ ಇದು ದೇಶ ಹೆಮ್ಮೆ ಪಡುವ ವಿಷಯವಾಗಿದೆ. * ಪ್ರಸ್ತುತ ವಿಶ್ವಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು ಅದರಲ್ಲಿ ಈ ಏಷಿಯಾ ಫೋರ್ಬ್ಸ್ ವಿಭಾ ಹರೀಶ್ ಮಾಡಿರುವ ಸಾಧನೆಯನ್ನು ಪರಿಗಣಿಸಿ ಇವರನ್ನು ಆಯ್ಕೆ ಮಾಡಿದೆ ಎಂದು ತಿಳಿಸಲಾಗಿದೆ. * ಬೆoಗಳೂರಿನ 25 ವರ್ಷದ ವಿಭಾ ಹರೀಶ್ ಅವರು "ಕಾಸ್ಮಿಕ್ಸ್" ಎಂಬ ಸ್ಟಾರ್ಟ್ಅಪ್ ಆರಂಭಿಸಿದ್ದರು ಇವರು ಈ ಕಂಪನಿಯ ಮೂಲಕ ಆರೋಗ್ಯ ಸಂಬಂಧಪಟ್ಟ ನ್ಯೂಟ್ರೀಷಿಯನ್ಸ್, ಸಪ್ಲಿಮೆಂಟ್ಸ್ಗಳನ್ನು ತಯಾರಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಯಶಸ್ಸು ಕಂಡಿದ್ದರು ಈ ಸಂಸ್ಥೆಯು ಕೋವಿಡ್-19 ವೈರಸ್ ಹರಡುವಕ್ಕಿಂತಲೂ ಮುನ್ನ ಪ್ರಾರಂಭವಾಗಿತ್ತು ದೇಶದೆಲ್ಲೆಡೆ ಹೆಸರು ಪಡೆದುಕೊಂಡಿತ್ತು. * ಈ ಕಂಪನಿಯ ಪದಾರ್ಥಗಳು ಆನ್ಲೈನ್'ನಲ್ಲಿ ಕೂಡ ಲಭ್ಯವಿದೆ ಎಂದು ತಿಳಿಸಿದ್ದಾರೆ.