Job Description: * ಪ್ರಮುಖ ತೈಲ ಕಂಪನಿಯಾಗಿರುವ BPCL ನಿಂದ ಆಸ್ಪತ್ರೆಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಪ್ರಾರಂಭವಾಗಿದೆ, ಈ ಆಮ್ಲಜನಕ ಸಿಲಿಂಡರ್ ಪೂರೈಕೆಯನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಉಚಿತವಾಗಿ ನೀಡುತ್ತಿದೆ. * ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್'ನ್ನು ಪ್ರತಿ ತಿಂಗಳಿಗೆ ಅಂದಾಜು 100 ಮೆಟ್ರಿಕ್ ಟನ್ ಆಕ್ಸಿಜನ್'ನ್ನು ನೀಡಲು BPCL ಸಹಾಯಸ್ತವನ್ನು ತೋರಿದೆ ಹಾಗೂ ಇದು ಸಂಪೂರ್ಣವಾಗಿ ಉಚಿತ ಸೇವೆಯಾಗಿದೆ ಎಂದು ತಿಳಿಸಿದೆ. * ಪ್ರಸ್ತುತ ದೆಹಲಿಯ ಆಸ್ಪತ್ರೆಗಳಿಗೆ 150 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್'ನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL) ತೈಲ ಘಟಕವು ನೀಡಲು ಮುಂದಾಗಿದೆ. * ಕರ್ನಾಟಕ ರಾಜ್ಯದ JSW ಸ್ಟೀಲ್ ಕಂಪನಿ ರಾಜ್ಯದಲ್ಲಿನ ಆಸ್ಪತ್ರೆಗಳಿಗೆ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ ಮಾಡಲು ಒಪ್ಪಕೊಂಡಿದೆ ಎಂದು JSW ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ತಿಳಿಸಿದ್ದಾರೆ. * ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ಉಕ್ಕಿನ ಕಂಪನಿಗಳು ಮುಂದಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನಿ ಸಚಿವ ನಿರಾಣಿ ತಿಳಿಸಿದ್ದಾರೆ.