Job Description: * ಮಂಗಳ ಗ್ರಹದ ಭೂ ಮೇಲ್ಮೈನಿಂದ ಇಂಗೆನ್ಯೂಟಿ ಎಂಬ ರೊಬೊಟಿಕ್ ಹೆಲಿಕಾಪ್ಟರನ್ನು ಕೆಲ ಕ್ಷಣಗಳವರೆಗೆ ನಾಸಾ ಹಾರಿಸಿತು. * ಇಂಗೆನ್ಯೂಟಿ ಹೆಲಿಕಾಪ್ಟರ್ 10 ಅಡಿಗಳವರೆಗೆ ಮಂಗಳ ಗ್ರಹದ ಮೇಲೆ ಹಾರಾಡಿತು, ನಾಸಾದ ವಿಜ್ಞಾನಗಳು ಇಂಗೆನ್ಯೂಟಿ ಹೆಲಿಕಾಪ್ಟರ್ 40 ಸೆಕೆಂಡುಗಳ ಹಾರಾಡುತ್ತದೆ ಎನ್ನುವ ಗುರಿಯನ್ನು ಹೊಂದಿದ್ದರು ಆದರೆ ಕೇವಲ 30 ಸೆಕೆಂಡುಗಳು ಮಾತ್ರ ಹಾರಾಡಿತು ಹಾಗೂ ಇದೊಂದು ಬಾಹ್ಯಾಕಾಶದ ಇತಿಹಾಸದಲ್ಲಿ ದಾಖಲೆಯಾಗಿದೆ. * ಮಂಗಳನ ಭೂಮೇಲ್ಮೆನ ಮೇಲೆ ಇಂಗೆನ್ಯೂಟಿ ಹೆಲಿಕಾಪ್ಟರ್ ಹಾರಾಡಿದ ತನ್ನ ಚಿತ್ರಗಳನ್ನು ಭೂಮಿಗೆ ರವಾನಿಸಿದೆ ಹಾಗೂ ಮಂಗಳವನ್ನು ತಲುಪಿರುವ ಪರ್ಸಿವೆರನ್ಸ್ ನೌಕೆಯ ಹಾರಾಟದ ದೃಶ್ಯಾವಳಿಗಳನ್ನು ಕೂಡ ಭೂಮಿಗೆ ಕಳುಹಿಸಿದೆ. * ನಾಸಾದ ವಿಜ್ಞಾನಿಗಳು ಈ ಕಾರ್ಯಾಚರಣೆಯನ್ನು ಜೆಟ್ ಪ್ರಾಪ್ಯುಲನ್ ಲ್ಯಾಬೊರೇಟರಿನಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.