Job Description: * ಅಡೋಬ್ನ ಸಹ ಸಂಸ್ಥಾಪಕ ಹಾಗೂ ಪಿಡಿಎಫ್ ತಂತ್ರಜ್ಞಾನದ ಡೆವಲಪರ್ ಆಗಿದ್ದ ಚಾರ್ಲ್ಸ್ ಚಕ್ ಗೆಶ್ಕೆ ಅವರು ತಮ್ಮ 81ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * ಪ್ರಸ್ತುತ ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಅಡೋಬ್ ಕಂಪನಿ ಕೂಡ ಒಂದಾಗಿದೆ. * 2009ರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಚಾರ್ಲ್ಸ್ ಚಕ್ ಗೆಶ್ಕೆ ಅವರು ಸಾಫ್ಟ್ವೇರ್ ಕಂಪನಿಗಳಲ್ಲಿ ಮಾಡಿರುವ ಸಾಧನೆಗಳನ್ನೂ ಪರಿಗಣಿಸಿ ಇವರಿಗೆ ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ ಪ್ರಶಸ್ತಿಯನ್ನು ನೀಡಿದ್ದರು. * 1982ರಲ್ಲಿ ಅಡೋಬ್ ಸಾಫ್ಟ್ವೇರ್ ಕಂಪನಿಯನ್ನು ಚಾರ್ಲ್ಸ್ ಚುಕ್ಗೆಶ್ಕೆ ಆರಂಭಿಸಿದರು, ಮತ್ತು 1990ರಲ್ಲಿ ಪಿಡಿಎಫ್ ಫಾರ್ಮೆಟ್ ಅಭಿವೃದ್ಧಿ ಪಡಿಸುವದರ ಜೊತೆಗೆ ತಂತ್ರಜ್ಞಾನ ಅಭಿವೃದ್ಧಿಗೆ ಪಾತ್ರರಾಗಿದ್ದರು. * ಅಡೋಬ್ ಸಾಫ್ಟ್ವೇರ್ ಕಂಪನಿಯನ್ನು ಚಾರ್ಲ್ಸ್ ಮತ್ತು ಜಾನ್ ವಾರ್ನಕ್ ಅಭಿವೃದ್ಧಿ ಪಡಿಸಿ ಪ್ರಾರಂಭಿಸಿದರು.