Job Description: * ಅಶೋಕ್ ಲೇಲ್ಯಾಂಡ್ ಲಿಮಿಟೆಡ್ ಕಂಪನಿಯು ಮೊದಲ ಲೈಟ್ ಬುಲೆಟ್ ಪ್ರೂಫ್ ವಾಹನಗಳನ್ನು ಭಾರತೀಯ ವಾಯು ಸೇನೆಗೆ ನೀಡಲಾಗುವದು ಎಂದು ತಿಳಿಸಿದೆ. * ಪ್ರಸ್ತುತ ಅಶೋಕ್ ಲೇಲ್ಯಾಂಡ್ ಕಂಪನಿಯು ತನ್ನ ಶಸ್ತ್ರಸಜ್ಜಿತ ವಾಹನಗಳನ್ನು ಭಾರತೀಯ ಸೇನೆಯನ್ನು ಸೇರಲಿವೆ ಇದರಿಂದ ಭಾರತೀಯ ಸೇನೆಯ ಶಕ್ತಿ ಇನ್ನಷ್ಟು ಬಲವಾಗಲಿದೆ ಎಂದು ತಿಳಿಸಿದೆ. * ಈ ಬುಲೆಟ್ ಪ್ರೂಫ್ ವಾಹನವನ್ನು ಲಾಕ್ಹೀಡ್ ಮಾರ್ಟಿನ್'ನಿಂದ ಅಶೋಕ್ ಲೇಲ್ಯಾಂಡ್ಗೆ ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. * ಈ ಸ್ವದೇಶಿ ನಿರ್ಮಿತ ಬುಲೆಟ್ ಪ್ರೂಫ್ ವಾಹನಗಳನ್ನು ಅಶೋಕ್ ಲೇಲ್ಯಾಂಡ್ ಕಂಪನಿ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಿದೆ. * ಈ ಬುಲೆಟ್ ಪ್ರೂಫ್ ವಾಹನಗಳು ಉತ್ತಮ ಯುದ್ಧ ಸಾಮರ್ಥ್ಯದ ಹಾಗೂ ಸಿಬ್ಬಂದಿಯ ಬ್ಯಾಲಿಸ್ಟಿಕ್ ಮತ್ತು ಬ್ಲಾಸ್ಟ್'ಗಳಿಂದ ರಕ್ಷಿಸುತ್ತವೆ ಎಂದು ತಿಳಿಸಿದ್ದಾರೆ. * ಲೇಲ್ಯಾಂಡ್ ವಾಹನವು 4 X 4 ಮತ್ತು 12 X 12 ಶಸ್ತ್ರಸಜ್ಜಿತ ವಾಹನಗಳು ಯುದ್ಧಭೂಮಿಯಲ್ಲಿ ಕಾರ್ಯತಂತ್ರದ ರೂಪವನ್ನು ಪಡೆದುಕೊಂಡಿವೆ ಹಾಗೂ ಅಶೋಕ ಲೇಲ್ಯಾಂಡ್ ಕಂಪನಿ 2014 ರಿಂದ ಮತ್ತು ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮದ ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಇನ್ನು ಹೆಚ್ಚಿನ ರಕ್ಷಣಾ ಸಾಧನಗಳನ್ನು ಒದಗಿಸುವ ಯೋಜನೆ ಇದೆ ಎಂದು ತಿಳಿಸಿದೆ.