Job Description: * ಭಾರತೀಯ ಕ್ರಿಕೆಟ್ ಆಟಗಾರರು ವಿಸ್ಡನ್ ದಶಕದ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. * ಭಾರತಕ್ಕೆ ಪ್ರಥಮ ಏಕದಿನ ವಿಶ್ವಕಪ್ ತಂದುಕೊಟ್ಟಿರುವ ನಾಯಕ ಕಪಿಲ್ದೇವ್, ಮತ್ತು ಕ್ರಿಕೆಟ ದೇವರು ಎಂದೇ ಪ್ರಖ್ಯಾತಿ ಮಡೆದಿರುವ ಸಚಿನ್ ತೆಂಡುಲ್ಕರ್, ಹಾಗೂ ಪ್ರಸ್ತುತ ಭಾರತ ಕ್ರಿಕೆಟ್ ಟೀಮ್'ನ ನಾಯಕನಾಗಿರುವ ವಿರಾಟ್ ಕೊಹ್ಲಿ, ಈ ಮೂರು ಭಾರತೀಯ ಕ್ರಿಕೆಟ್ ಆಟಗಾರರು ಲಂಡನ್ನಿನ ಪ್ರತಿಷ್ಠಿತ ವಿಸ್ಡನ್ ಪತ್ರಿಕೆಯ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. * ಇಂಗ್ಲೆಂಡ್ ತಂಡದ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್'ರವರಿಗೆ ಸತತವಾಗಿ 2ನೇ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. * ವಿಸ್ಡನ್ ಪತ್ರಿಕೆಯ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು1971 ರಿಂದ 2021ರವರೆಗೆ ನೀಡುತ್ತಾ ಬಂದಿದೆ. * ಪ್ರತಿ ದಶಕಗಳಿಗೆ ಒಬ್ಬ ಕ್ರಿಕೆಟ್ ಸಾಧಕರನ್ನು ಗುರುತಿಸಿ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. - 1970ರ ದಶಕದಲ್ಲಿ: ವಿವಿಯನ್ ರಿಚರ್ಡ್ಸ್ - 1980ರ ದಶಕದಲ್ಲಿ: ಕಪಿಲ್ದೇವ್ - 1990ರ ದಶಕದಲ್ಲಿ: ಸಚಿನ್ ತೆಂಡುಲ್ಕರ್ - 2000ದ ದಶಕದಲ್ಲಿ: ಮುತ್ತಯ್ಯ ಮುರಳೀಧರನ್ - 2010ರ ದಶಕದಲ್ಲಿ: ವಿರಾಟ್ ಕೊಹ್ಲಿ ಅವರಿಗೆ ಲಭಿಸಿದೆ. * 2021ರ ವಿಸ್ಡನ್ ಗೌರವ ಪ್ರಶಸ್ತಿಗೆ, 5 ಕ್ರಿಕೆಟಿಗರ ಹೆಸರನ್ನೂ ಪ್ರಕಟಿಸಲಾಗಿದೆ. - ಡಾಮ್ ಸಿಬ್ಲಿ - ಜಾಕ್ ಕ್ರಾಲಿ - ಜಾಸನ್ ಹೋಲ್ಡರ್ - ಮೊಹಮ್ಮದ್ ರಿಜ್ವಾನ್ - ಡ್ಯಾರನ್ ಸ್ಟೀವನ್ಸ್ ಭಾರತೀಯ ಕ್ರಿಕೆಟ್ ಬಗ್ಗೆ ಮಾಹಿತಿ : * ಟೀಮ್ ಇಂಡಿಯಾ ಮತ್ತು ಮೆನ್ ಇನ್ ಬ್ಲೂ ಎಂದೂ ಕರೆಯಲ್ಪಡುವ ಭಾರತದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(BCCI) ನಿಯಂತ್ರಿಸುತ್ತದೆ, ಮತ್ತು ಟೆಸ್ಟ್, ಏಕದಿನ ಅಂತರರಾಷ್ಟ್ರೀಯ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸ್ಥಾನಮಾನದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸದಸ್ಯರಾಗಿದ್ದಾರೆ. * ಪ್ರಸ್ತುತ ತಂಡದ ನಾಯಕ : ವಿರಾಟ್ ಕೊಹ್ಲಿ * ತರಬೇತುದಾರರು: ರವಿಶಾಸ್ತ್ರಿ (ಮುಖ್ಯ ಕೋಚ್), ಭಾರತ್ ಅರುಣ್ (ಬೌಲಿಂಗ್ ಕೋಚ್), ರಾಮಕೃಷ್ಣನ್ ಶ್ರೀಧರ್ (ಫೀಲ್ಡಿಂಗ್ ಕೋಚ್)