Job Description: * ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಭಾರತದ ಮೊಟ್ಟಮೊದಲ ಮಾನವ ಸಹಿತ ಗಗನಯಾನ ಅನುಷ್ಠಾನಕ್ಕಾಗಿ ಫ್ರಾನ್ಸ್ ದೇಶದ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. * ಫ್ರಾನ್ಸ್ನ ವಿದೇಶಾಂಗ ಸಚಿವ ಜೀನ್-ಯೆಸ್ ಲಿ ಡ್ರಿಯಾನ್'ರವರು ಭಾರತದ ಇಸ್ರೋ ಕೇಂದ್ರ ಕಚೇರಿಗೆ ಭೇಟಿಯಾದ ಸಂದರ್ಭದಲ್ಲಿ ಈ ಗಗನಯಾನ ಒಪ್ಪಂದಕ್ಕೆ ಎರಡು ರಾಷ್ಟ್ರಗಳು ಸಹಿ ಹಾಕಿವೆ. * ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ ಮಧ್ಯೆ ಆಗಿರುವ ಒಪ್ಪಂದದ ಪ್ರಕಾರ ಗಗನಯಾನದಲ್ಲಿ ಭಾಗಿಯಾಗುವ ಗಗನಯಾನಿಗಳಿಗೆ ಫ್ರಾನ್ಸ್ ಬಾಹ್ಯಾಕಾಶ ಕೇಂದ್ರದಲ್ಲಿ ಮೈಕ್ರೋ ಗ್ರಾವಿಟಿಯಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುವಬೇಕು ಎನ್ನುವದನ್ನು ಹೇಳಿಕೊಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ISRO) ಬಗ್ಗೆ ಮಾಹಿತಿ : * ಭಾರತೀಯ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ಇಸ್ರೋ ಅಧ್ಯಕ್ಷರು ಡಾಸ್ನ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. * ಪ್ರಧಾನ ಕಚೇರಿ: ಬೆಂಗಳೂರು * ಸ್ಥಾಪಕ: ವಿಕ್ರಮ್ ಸಾರಾಭಾಯ್ * ಸ್ಥಾಪನೆ: 15 ಆಗಸ್ಟ್ 1969 * ನಿರ್ದೇಶಕ: ಕೈಲಸಾವಾಡಿವ ಶಿವನ್ * ಅಂಗಸಂಸ್ಥೆ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ * ಪೋಷಕ ಸಂಸ್ಥೆ: ಬಾಹ್ಯಾಕಾಶ ಇಲಾಖೆ