Job Description: * ಸಿಟಿಬ್ಯಾಂಕ್ ಇದು ಅಮೇರಿಕದ ಬ್ಯಾಂಕಿಂಗ್ ಕಂಪನಿಯಾಗಿದೆ. * ಸಿಟಿಬ್ಯಾಂಕ್ ಭಾರತದಲ್ಲಿನ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಪ್ರಕಟಿಸಿದೆ. * ಭಾರತದಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಗೃಹ ಸಾಲ, ಸಂಪತ್ತು ನಿರ್ವಹಣೆ ಸೇವೆಗಳನ್ನು ನೀಡುತ್ತಿದೆ. * ಪ್ರಸ್ತುತ ಭಾರತ ದೇಶದಲ್ಲಿ ಸಿಟಿ ಬ್ಯಾಂಕ್ ಒಟ್ಟು 35 ಶಾಖೆಗಳನ್ನು ಹೊಂದಿದೆ. * 1985ರಿಂದ ಸಿಟಿ ಬ್ಯಾಂಕ್ ಭಾರತದಲ್ಲಿ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದೆ. * ಪ್ರಸ್ತುತ ಸಿಟಿಬ್ಯಾಂಕ್ ಕಂಪನಿಯು 13 ದೇಶಗಳಲ್ಲಿ ತನ್ನ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. * ಸಿಟಿಬ್ಯಾಂಕ್ 13 ದೇಶಗಳಲ್ಲಿನ ಬೇರೆ ಬೇರೆ ಬ್ಯಾಂಕ್'ಗಳಿಗೆ ಸ್ಪರ್ಧೆ ನೀಡುವಲ್ಲಿ ಬೃಹತ್ ಆಗಿ ಬೆಳೆದಿಲ್ಲ ಎನ್ನುವ ಕಾರಣಕ್ಕೆ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಿಟಿಬ್ಯಾಂಕ್ನ ಜಾಗತಿಕ ವಹಿವಾಟುಗಳ CEO ಜೇನ್ ಫ್ರೇಸರ್ ತಿಳಿಸಿದ್ದಾರೆ.