Job Description: * ಕ್ಲೀನ್ಮ್ಯಾಕ್ಸ್ ಎಂಬ ಸ್ಥಳೀಯ ಸಂಸ್ಥೆಯಿಂದ ಭಾರತದಲ್ಲಿ ನವೀಕರಿಸಬಹುದಾದ ಇಂಧನವನ್ನು ಖರೀದಿಸುವ ಒಪ್ಪಂದಕ್ಕೆ ಫೇಸ್ಬುಕ್ ಸಹಿ ಹಾಕಿದೆ, ಮತ್ತು ಇದು ಫೇಸ್ಬುಕ್ನ ಮೊದಲ ನವೀಕರಿಸಬಹುದಾದ ಯೋಜನೆಯಾಗಿದೆ ಎಂದು ತಿಳಿದಿದೆ. * ಫೇಸ್ಬುಕ್ ಮತ್ತು ಕ್ಲೀನ್ಮ್ಯಾಕ್ಸ್ ಜೊತೆಯಾಗಿ ಭಾರತದ ವಿದ್ಯುತ್ ಗ್ರಿಡ್ಗೆ ನವೀಕರಿಸಬಹುದಾದ ಶಕ್ತಿಯನ್ನು ನೀಡುತ್ತವೆ. * ಫೇಸ್ಬುಕ್ ತನ್ನ ಡೇಟಾ ಕೇಂದ್ರಕ್ಕೆ ಶಕ್ತಿ ತುಂಬಲು ಕ್ಲೀನ್ಮ್ಯಾಕ್ಸ್ನಿಂದ ಖರೀದಿಸಿದ ನವೀಕರಿಸಬಹುದಾದ ಶಕ್ತಿಯನ್ನು ಬಳಸಲಿದೆ, ಮತ್ತು ಡೇಟಾ ಕೇಂದ್ರದ ಕಾರ್ಯಾಚರಣೆಯನ್ನು 2022 ರಲ್ಲಿ ಪ್ರಾರಂಭಿಸಲಿದೆ ಎಂದು ಫೇಸ್ಬುಕ್ ತಿಳಿಸಿದೆ. * ಫೇಸ್ಬುಕ್'ನ ಈ ಯೋಜನೆಯಿಂದ 160 MW ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯವಿದೆ ಎಂದು ತಿಳಿದುಬಂದಿದೆ.