Job Description: * ಭಾರತದ ಜನರ ಮಾನಸಿಕ ಸಾಮರ್ಥ್ಯವನ್ನು ಉತ್ತೇಜಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಈ ಮೊಬೈಲ್ ಅಪ್ಲಿಕೇಶನ್'ನ್ನು ಬಿಡುಗಡೆ ಮಾಡಿದ್ದಾರೆ. * ಮನಸ್ ಎಂದರೆ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ವರ್ಧನೆ ವ್ಯವಸ್ಥೆ ಎಂದರ್ಥ, ಹಾಗೂ ಇದು ಸಮಗ್ರ ಮತ್ತು ರಾಷ್ಟ್ರೀಯ ಡಿಜಿಟಲ್ ಯೋಗಕ್ಷೇಮ ವೇದಿಕೆಯಾಗಿದೆ. * ಮನಸ್ ಆ್ಯಪ್ ಅನ್ನು ನಿಮ್ಹಾನ್ಸ್ ಬೆಂಗಳೂರು, ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆ ಅಭಿವೃದ್ಧಿಪಡಿಸಿದೆ. * ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆಯ 34ನೇ ಫೌಂಡೇಶನ್ ಆಚರಣೆಯ ಸಂದರ್ಭದಲ್ಲಿ ಈ ಅಪ್ಲಿಕೇಶನ್'ನ್ನು ಪ್ರಾರಂಭ ಮಾಡಲಾಗಿದೆ. * ಈ ಮನಸ್ ಅಪ್ಲಿಕೇಶನ್ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಧಿಸಿದ ಆಪ್ ಆಗಿದೆ.