Job Description: * ಸುಶೀಲ್ ಚಂದ್ರ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗಲಿದ್ದಾರೆ. * ಪ್ರಸ್ತುತ ಚುನಾವಣಾ ಆಯೋಗವು ಅತ್ಯಂತ ಹಿರಿಯ ಆಯುಕ್ತರನ್ನೇ ಮುಖ್ಯ ಚುನಾವಣಾ ಆಯುಕ್ತ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ. * ಸುಶೀಲ್ ಚಂದ್ರ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲು ಸರ್ಕಾರವು ಒಪ್ಪಿಗೆಯನ್ನು ನೀಡಿದೆ ಎಂದು ತಿಳಿದು ಬಂದಿದೆ. * ಇದೆ ಏಪ್ರಿಲ್ 13ರಂದು ಮುಖ್ಯ ಚುನಾವಣಾ ಆಯುಕ್ತರಾಗಿರುವ ಸುನೀಲ್ ಅರೋರಾ ಅವರ ಅವಧಿ ಮುಗಿಯಲಿದೆ, ಮುಂದಿನ ದಿನಗಳಲ್ಲಿ ಸುಶೀಲ್ ಚಂದ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಬಗ್ಗೆ ಮಾಹಿತಿ : * ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿರುತ್ತದೆ. * ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ: 26-05-1993 ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. * ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್ಎ) ರಡಿಯಲ್ಲಿ ರಚಿಸಲಾಗಿದೆ. * ರಾಜ್ಯ ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದೆ, * ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ನಡೆಸಲಾಗುತ್ತದೆ. * ನಾಲ್ಕು ಹಂತದ ನಗರ ಸ್ಥಳೀಯ ಸಂಸ್ಥೆ ಅಂದರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸುತ್ತದೆ.