Job Description: * ಭಾರತವು ಇರಾನ್ ಚಬಹಾರ್ ಬಂದರಿನ ಅಭಿವೃದ್ಧಿ ಕಾರ್ಯ ನಡೆಸಿದೆ, ಈ ಹಿಂದೆ ಕೆಲಕಾಲವರೆಗೆ ಬಂದರಿನ ಅಭಿವೃದ್ಧಿ ಸ್ಥಗಿತಗೊಳಿಸಲಾಗಿತ್ತು. * ಇದೀಗ ಇರಾನ್ನ ಚಬಹಾರ್ ಬಂದರು ಅಭಿವೃದ್ಧಿ ಕಾರ್ಯವು ಭರದಿಂದ ಸಾಗಿದೆ ಮತ್ತು ಇದು ಮುಂಬರುವ ತಿoಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಹಾಗೂ ಈ ಬಂದರು ಬಳಕೆಗೆ ಲಭ್ಯವಾಗಲಿದೆ ಎಂದು ಅಮೆರಿಕದ ಸಂಸತ್ಗೆ ಸಲ್ಲಿಸಲಾದ ವರದಿಯಲ್ಲಿ ಭಾರತ ತಿಳಿಸಿದೆ. * ಈ ಇರಾನ್ನ ಚಬಹಾರ್ ಬಂದರು ಅಭಿವೃದ್ಧಿಯಿಂದಾಗಿ ಪಾಕಿಸ್ತಾನದಿಂದ ಯಾವುದೇ ಅಡ್ಡ ಪರಿಣಾಮ ಹಾಗೂ ಅಡೆತಡೆಗಳಿಲ್ಲದೆ ಅಫ್ಗಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟ ಮಾಡುವ ಅನುಕೂಲವಾಗಲಿದೆ ಎಂದು ಭಾರತ ತಿಳಿಸಿದೆ. * ಭಾರತವು 2015ರಲ್ಲಿ ಚಬಹಾರ್ ಬಂದರು ಮತ್ತು ರೈಲು ಮಾರ್ಗದ ಅಭಿವೃದ್ಧಿಗೆ ನೆರವು ನೀಡಲು ಒಪ್ಪಿಗೆಯನ್ನು ನೀಡಿತ್ತು. * ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಇರಾನ್ಗೆ ಭೇಟಿ ನೀಡಿದ ಸಂಧರ್ಭದಲ್ಲಿ 3,473 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇರಾನ್ ದೇಶದ ಬಗ್ಗೆ ಮಾಹಿತಿ : * ಪರ್ಷಿಯಾ ಎಂದೂ ಕರೆಯಲ್ಪಡುವ ಇರಾನ್ ಮತ್ತು ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಪಶ್ಚಿಮ ಏಷ್ಯಾದ ಒಂದು ದೇಶವಾಗಿದೆ. * ಇದು ವಾಯುವ್ಯಕ್ಕೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್, ಉತ್ತರಕ್ಕೆ ಕ್ಯಾಸ್ಪಿಯನ್ ಸಮುದ್ರ ಗಡಿಯಲ್ಲಿದೆ * ರಾಜಧಾನಿ: ಟೆಹ್ರಾನ್ * ಕರೆನ್ಸಿ: ಇರಾನಿನ ರಿಯಾಲ್ * ಅಧ್ಯಕ್ಷ: ಹಸನ್ ರೂಹಾನಿ * ಸುಪ್ರೀಂ ನಾಯಕ: ಅಲಿ ಖಮೇನಿ * ಅಧಿಕೃತ ಭಾಷೆ: ಪರ್ಷಿಯನ್