Job Description: ಭಾರತದಲ್ಲಿ 2020-21 ಸಾಲಿನ ಸಕ್ಕರೆ ಉತ್ಪಾದನೆಯಲ್ಲಿ ಒಟ್ಟು 258.68 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಲಾಗಿದ್ದು, ಒಟ್ಟು 502 ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯಲ್ಲಿ ಪಾಲ್ಗೊಂಡಿದ್ದವು. * ಮಹಾರಾಷ್ಟ್ರ ರಾಜ್ಯವು ಒಟ್ಟು 95.05 ಲಕ್ಷಟನ್ ಸಕ್ಕರೆ ಉತ್ಪಾದಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನದಲ್ಲಿದೆ.(ಉತ್ಪಾದನೆ ಇನ್ನು ಮುಂದುವರೆದಿದೆ) * ಉತ್ತರ ಪ್ರದೇಶದಲ್ಲಿ ಈ ವರ್ಷ 84.25 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ. * ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಒಟ್ಟು 66 ಸಕ್ಕರೆ ಕಾರ್ಖಾನೆಗಳು 41.84 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. * ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ. ಬಾಗಲಕೋಟೆ ಜಿಲ್ಲೆ ಸಕ್ಕರೆ ಉತ್ಪಾದನೆಯಲ್ಲಿ ದ್ವೀತಿಯ ಸ್ಥಾನದಲ್ಲಿದೆ. * ಬಾಗಲಕೋಟೆಯ ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಇಂಡಿಯನ್ ಕೇನ್ ಪಾವರ್ ಲಿ. ಕಾರ್ಖಾನೆ 2.21ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.