Job Description: * ಪೂರ್ವಹಿಂದೂ ಮಹಾಸಾಗರದಲ್ಲಿ ಮೂರು ದಿನಗಳ ಅವಧಿಯ ಪಂಚ ರಾಷ್ಟ್ರಗಳ ನೌಕಾದಳದ ಶಕ್ತಿ ಪ್ರದರ್ಶನ, ಕಸರತ್ತು ಕಾರ್ಯಕ್ರಮವಾದ 'ಲಾ ಪೆರೌಸ್' ಗೆ ಚಾಲನೆ ದೊರೆತಿದೆ. ಈ ಶಕ್ತಿ ಪ್ರದರ್ಶನದಲ್ಲಿ ಭಾರತ ಹಾಗೂ ಉಳಿದ ಮೂರು ಕ್ವಾಡ್ ಸದಸ್ಯ ರಾಷ್ಟ್ರಗಳು (ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ) ಜೊತೆಗೆ ಫ್ರಾನ್ಸ್ ರಾಷ್ಟ್ರಗಳು ಪಾಲ್ಗೊಂಡಿವೆ. * ಈ ಕಾರ್ಯಕ್ರಮದಲ್ಲಿ ಭಾರತದ ನೌಕಾಪಡೆಯ ಹಡಗುಗಳಾದ ಐಎನ್ಎಸ್ ಸಾತ್ಪುರ ಮತ್ತು ಐಎನ್ಎಸ್ ಕಿಲ್ತಾನ್ ಹಾಗೂ ಪಿ-8ಐ ದೂರಗಾಮಿ ಕ್ಷಿಪಣಿ ಉಡಾವಣಾ ವಾಹಕಗಳು ಭಾಗವಹಿಸುತ್ತಿವೆ. * ಭಾರತದ ಜೊತೆಗೆ ಫ್ರಾನ್ಸ್, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ನೌಕಾಪಡೆಯ ಹಡಗು, ವಿಮಾನಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ.