Job Description: * ರಷ್ಯಾದ ವಿದೇಶಾಂಗ ಸಚಿವ ಸರ್ಜೈ ಲಾವ್ರೊವ್ ಅವರು ಇತ್ತೀಚಿಗೆ ಭಾರತಕ್ಕೆ ಎರಡು ದಿನಗಳ ಮಟ್ಟಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. * ಈ ಭೇಟಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರಗಳ ಸಂಬಂಧ ಚರ್ಚೆ ನಡೆಸಲಿದ್ದಾರೆ. * ಪ್ರತಿ ವರ್ಷ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನ ನಡೆಯುತ್ತಿತ್ತು, ಆದರೆ ಕಳೆದ ವರ್ಷ ಈ ಸಮ್ಮೇಳನವನ್ನು ಕೋವಿಡ್-19 ಸೋಂಕಿನ ಕಾರಣ ರದ್ದುಪಡಿಸಲಾಗಿತ್ತು, ಇದೀಗ ಈ ಸಮ್ಮೇಳನ ನಡೆಯುವ ಲಕ್ಷಣಗಳು ಘೋಚರಿಸಿವೆ. * ಭಾರತವು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳೊಂದಿಗಿನ 'ಕ್ವಾಡ್' ಒಕ್ಕೂಟದ ಕಾರಣದಿಂದ ರಷ್ಯಾ ಮುನಿಸಿಕೊಂಡಿರುವುದಾಗಿ ಭಾವಿಸಲಾಗಿದೆ.