Job Description: ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡಲು ಹಾಗು ಆಮದು ಮಾಡಿಕೊಳ್ಳಲು ಸಾಗರಗಳ ಪಾತ್ರ ಪ್ರಮುಖವಾದುದು, ಈ ಮೂಲಕ ದೇಶದ ಆರ್ಥಿಕತೆಗೆ ಪ್ರಮುಖ ಆಧಾರವಾಗಿವೆ. * ಭಾರತೀಯ ಹಡಗು 1919ರ ಎಪ್ರಿಲ್ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿದ ಹಿನ್ನಲೆ ಪ್ರತಿ ವರ್ಷ ಎಪ್ರಿಲ್ 05 ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. * ಮೊದಲ ಅತೀ ದೊಡ್ಡ ಹಡಗು ಕಂಪೆನಿಯಾದ ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಲಿ.ನ ಮೊದಲ ಹಡಗು ಎಸ್ಎಸ್ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್ ಕಿಂಗ್ಡಮ್ (ಲಂಡನ್)ಗೆ ಪ್ರಯಾಣ ಬೆಳೆಸಿದ ದಿನ. * 1964 ರಿಂದ ರಾಷ್ಟ್ರೀಯ ಕಡಲ ದಿನ ಆಚರಣೆಗೆ ಬಂದಿದೆ. * ಮೊದಲ ಪ್ರಯಾಣದಲ್ಲಿ ಭಾರತೀಯ ಮಸಾಲೆಗಳು, ಧೂಪದ್ರವ್ಯ ಮತ್ತು ಜವಳಿಗಳನ್ನೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು.