Job Description: - 2010 ಫೆಬ್ರುವರಿ 15, ಸಿಲ್ಡಾ (ಪ. ಬಂಗಾಲ) ನಕ್ಸಲರ ನಿರ್ಮೂಲನೆಗಾಗಿ ಪ. ಬಂಗಾಲ ಸರಕಾರ “ಆಪರೇಷನ್ ಪೀಸ್ ಹಂಟ್’ ಕಾರ್ಯಾಪಡೆ ರಚಿಸಿದ ಹಿನ್ನಲೆ ರೊಚ್ಚಿಗೆದ್ದ ಮಾವೋವಾದಿಗಳು ಸಿಲ್ಡಾ ಕ್ಯಾಂಪ್ ಮೇಲೆ ದಾಳಿ ನಡೆಸಿ 24 ಅರೆಸೇನಾ ಸಿಬ್ಬಂದಿಯನ್ನು ಹತ್ಯೆಮಾಡಿದ್ದರು. - 2010 ಏಪ್ರಿಲ್ 06, ದಾಂತೇವಾಡ (ಚತ್ತೀಸ್ಗಢ) ದಾಂತೇವಾಡ ಜಿಲ್ಲೆಯಲ್ಲಿ 300ಕ್ಕೂ ಅಧಿಕ ನಕ್ಸಲರು ತರಬೇತಿಯಲ್ಲಿರುವಾಗ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿ 76 ಯೋಧರನ್ನು ಬಲಿ ಪಡೆದಿದ್ದರು. ಜೊತೆಗೆ 8 ಮಾವೋವಾದಿಗಳು ಹತರಾಗಿದ್ದರು. - 2010 ಮೇ 28, ಮಿಡ್ನಾಪುರ (ಪ. ಬಂಗಾಲ) ಕೋಲ್ಕತಾ - ಮುಂಬಯಿ ನಡುವಿನ ”ಜ್ಞಾನೇಶ್ವರಿ ಎಕ್ಸ್ಪ್ರಸ್" ರೈಲಿನ ಹಳಿ ತಪ್ಪಿಸಿದ ಪರಿಣಾಮ, ಟ್ರೈನ್ ಎದುರು ಬರುತ್ತಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ 148 ಮಂದಿ ಅಸುನೀಗಿದ್ದರು. - 2012 ಮಾರ್ಚ್ 27, ಗಡಚಿರೋಲಿ(ಮಹಾರಾಷ್ಟ್ರ ) 40 ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಗೆ ನೆಲಬಾಂಬ್ ಸ್ಫೋಟಿಸಿಡಾ ಕಾರಣ 12 ಯೋಧರು ಸಾವನ್ನಪ್ಪಿದ್ದರು, ಇತರ 28 ಜನ ಗಾಯಗೊಂಡಿದ್ದರು. - 2014 ಮಾರ್ಚ್ 11, ತೊಂಗಾ³ಲ್ (ಚತ್ತೀಸ್ಗಢ) ಸುಕ್ಮಾ ಜಿಲ್ಲೆಯ ದಾಳಿ ನಡೆಸಿ, 15 ಸಿಆರ್ಪಿಎಫ್ ಯೋಧರು, ಒಬ್ಬ ನಾಗರಿಕ ಹತ್ಯೆಗಯ್ಯಲಾಗಿತ್ತು. - 2017ರಲ್ಲೂ ಸುಕ್ಮಾ ಜಿಲ್ಲೆಯಲ್ಲೇ ಸಿಆರ್ಪಿಎಫ್ ಕ್ಯಾಂಪ್ ಮೇಲೆ ನಡೆದ ನಕ್ಸಲರ ದಾಳಿಗೆ 25 ಯೋಧರು ವೀರ ಮರಣವನ್ನಪ್ಪಿದ್ದರು. - 2019 ಮೇ 1, ಗಡಚಿರೋಲಿ (ಮಹಾರಾಷ್ಟ್ರ) ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ 15 ಪೊಲೀಸರು ಸಾವಿಗೀಡಾದರು. - 2020, ಮಾರ್ಚ್ 21, ಸುಕ್ಮಾ (ಚತ್ತೀಸಗಡ) ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ 23 ನಕ್ಸಲರನ್ನು ಹತ್ಯೆಗಯ್ಯಲಾಗಿತ್ತು, ಇದೆ ವೇಳೆ 17 ವೀರಯೋಧರು ಹುತಾತ್ಮರಾಗಿದ್ದರು. ನಕ್ಸಲ್ ನಿಗ್ರಹಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳು : - ಪೊಲೀಸ್ ಪಡೆಗೆ ಆಧುನಿಕ ಸ್ಪರ್ಶ, - ಕೋಬ್ರಾ ಪಡೆ ರಚನೆ, - ಗುಪ್ತಚರ ಜಾಲ ಹೆಚ್ಚಳ ರಾಜ್ಯದ ಭದ್ರತ ಸಂಬಂಧಿ ಮೂಲ ಸೌಕರ್ಯ ಹೆಚ್ಚಳ, - ನಕ್ಸಲ್ ವಲಯಗಳಲ್ಲಿ ವಿಶೇಷ ಮೂಲ ಸೌಕರ್ಯ ಯೋಜನೆ ಭದ್ರತ ಪಡೆಯ ಬಲವರ್ಧನೆಗೆ “ಸಮಾಧಾನ್’ ಯೋಜನೆ, - ಸಿಪಿಐ (ಮಾವೋವಾದಿ) ಸಂಘಟನೆಗೆ ನಿಷೇಧ.