Job Description: * ಅತಿ ವೇಗದ ರಸ್ತೆ ನಿರ್ಮಾಣದಲ್ಲಿ ಭಾರತ ವಿಶ್ವ ದಾಖಲೆ ಹೊಂದಿದೆ, ಮತ್ತು ಮಾರ್ಚ್ ತಿಂಗಳಿನಲ್ಲಿ ಮೂರು ವಿಶ್ವದಾಖಲೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದರು. * 24 ಗಂಟೆಯಲ್ಲಿ 2.5 ಕಿ.ಮೀ 4 ಪಥದ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ. * 24 ಗಂಟೆಗಳಲ್ಲಿ 25 ಕಿ.ಮೀ ಉದ್ದದ ಸೋಲಾಪುರ-ಬಿಜಾಪುರ ರಸ್ತೆಯನ್ನೂ ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ. * 24 ಗಂಟೆಗಳಲ್ಲಿ 2,580 ಮೀಟರ್ ಉದ್ದದ ಚತುಷ್ಪಥ ಹೆದ್ದಾರಿಗೆ ಫುಟ್ ಪಾತ್ ಗುಣಮಟ್ಟ ಕಾಂಕ್ರೀಟ್ ಹಾಕುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. * ಪ್ರಸ್ತುತ 2020-21ನೇ ಹಣಕಾಸು ವರ್ಷದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 13,394 ಕಿ.ಮೀ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದರು. ನಿತಿನ್ ಗಡ್ಕರಿ ರವರ ಬಗ್ಗೆ ಮಾಹಿತಿ : * ನಿತಿನ್ ಜೈರಾಮ್ ಗಡ್ಕರಿ ಮಹಾರಾಷ್ಟ್ರದ ಭಾರತೀಯ ರಾಜಕಾರಣಿ ಮತ್ತು ಉದ್ಯಮಿಯಾಗಿದ್ದರು * ಪ್ರಸ್ತುತ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಮತ್ತು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದಾರೆ. * ನಿತಿನ್ ಗಡ್ಕರಿ ಈ ಹಿಂದೆ 2009 ರಿಂದ 2013 ರವರೆಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. * ಜನನ : 27 ಮೇ 1957 ನಾಗ್ಪುರ * ಪಕ್ಷ : ಭಾರತೀಯ ಜನತಾ ಪಕ್ಷ * ಕಚೇರಿ : 2014 ರಿಂದ ಲೋಕಸಭಾ ಸದಸ್ಯರಾಗಿದ್ದರು