Job Description: * ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸೇವೆಯ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. * ಆಧಾರ್ ಕಾರ್ಡ್ ತಯಾರಕ ಸರ್ಕಾರಿ ಸಂಸ್ಥೆಯು ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸುವಂತೆ ಯುಐಡಿಎಐ ಟ್ವೀಟರ್ ಮೂಲಕ ಮಾಹಿತಿ ನೀಡಿದೆ. * ಬಾಲ್ ಆಧಾರ್ ಕಾರ್ಡನ್ನು 5 ವರ್ಷದೊಳಗಿನ ಮಕ್ಕಳಿಗಾಗಿ ತಯಾರಿಸಲಾಗುತ್ತದೆ. * ಈ ಬಾಲ್ ಆಧಾರ್ ಕಾರ್ಡ ನೀಲಿ ಬಣ್ಣದಲ್ಲಿರುತ್ತದೆ, ಮಗುವಿಗೆ 5 ವರ್ಷವಾಗ್ತಿದ್ದಂತೆ ಈ ಆಧಾರ್ ರದ್ದಾಗುತ್ತದೆ ನಂತರ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ವಿವರ ನೀಡಿ ಮಕ್ಕಳ ಶಾಶ್ವತ ಆಧಾರ್ ಪಡೆಯಬಹುದಾಗಿದೆ ಎಂದು ಆಧಾರ್ ಕಾರ್ಡ್ ತಯಾರಕ ಸರ್ಕಾರಿ ಸಂಸ್ಥೆ ತಿಳಿಸಿದೆ.