Job Description: * ಆಸ್ಟೇಲಿಯಾ ರಾಷ್ಟ್ರವು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಮೆರಿಕದ ರಾಷ್ಟ್ರದ ಸಹಯೋಗದೊಂದಿಗೆ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಿಕೊಳ್ಳಲು ಮುಂದಾಗಿದೆ. * ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್'ರವರು ನೀಡಿರುವ ಮಾಹಿತಿ ಪ್ರಕಾರಈಗಿನ ಜಾಗತಿಕ ಪರಿಸರದಲ್ಲಿ ಶಸ್ತ್ರಾಸ್ತ್ರ ನಿರ್ಮಾಣದ ಪಾಲುದಾರಿಕೆ ನಡೆಸಿ ಕ್ಷಿಪಣಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ, ಜೊತೆಗೆ ಇದರಿಂದ ಆಸ್ಟೇಲಿಯಾದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿ ಮತ್ತು ಕ್ಷಿಪಣಿ ರಫ್ತು ಅವಕಾಶವೂ ಸಿಗಲಿದೆ ಎಂದು ತಿಳಿಸಿದ್ದಾರೆ. * ಆಸ್ಟೇಲಿಯಾ ದೇಶವು ಸರಿ ಸುಮಾರು ಮುಂದಿನ 20 ವರ್ಷಗಳಲ್ಲಿ ಕ್ಷಿಪಣಿ ವ್ಯವಸ್ಥೆಗಾಗಿಯೇ ಆಸ್ಟ್ರೇಲಿಯಾ 100 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಬರಿಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್'ರವರು ಮಾಹಿತಿ ನೀಡಿದ್ದಾರೆ.