Job Description: * ಚೀನಾ ದೇಶದ ಮದ್ಯ(ಆಲ್ಕೋಹಾಲ್) ಕಂಪೆನಿ ತನ್ನ ಘಟಕವನ್ನು ಪಾಕಿಸ್ತಾನದಲ್ಲಿ ಇತ್ತೀಚಿಗೆ ಸ್ಥಾಪನೆ ಮಾಡಿದೆ. * 2020ರ ಏಪ್ರಿಲ್ 30 ರಂದು ಚೀನಾದ ಹುಯಿ ಕೋಸ್ಟಲ್ ಬ್ರೂವರಿ ಮತ್ತು ಡಿಸ್ಟಿಲರಿ ಲಿಮಿಟೆಡ್ ಕಂಪನಿಯು ಪಾಕಿಸ್ತಾನ ಮಾರುಕಟ್ಟೆಯನ್ನು ಲಗ್ಗೆ ಇಟ್ಟಿತು, ಮತ್ತು ದೇಶದ ಹಣಕಾಸು ನಿಯಂತ್ರಣ ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಚೀನಾದ ಈ ಕಂಪನಿಯು ಕಳೆದ ವಾರ ಮಧ್ಯ ಉತ್ಪಾದನೆಯನ್ನು ಆರಂಭಿಸಿದೆ. * ಅಬಕಾರಿ ತೆರಿಗೆ ನಿರ್ದೇಶಕ ನಿರ್ದೇಶಕ ಮೊಹಮ್ಮದ್ ಜಮಾನ್ ಖಾನ್ ನೀಡಿರುವ ಮಾಹಿತಿ ಪ್ರಕಾರ ಚೀನಾದ ಕಂಪನಿಯು ತಯಾರಿಸಿದ ಈ ಮಧ್ಯವನ್ನು ಪಾಕಿಸ್ತಾನದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಚೀನಾ ಪ್ರಜೆಗಳಿಗೆ ಈ ಮಧ್ಯದ ಉತ್ಪನ್ನವನ್ನು ಒದಗಿಸಲಾಗುವದು ತಿಳಿಸಿದ್ದಾರೆ.