Job Description: * ವಿಶ್ವಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಭಾರತವು ಜಾಗತಿಕವಾಗಿ ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ, ಎಂದು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ವಿಶ್ವಸಂಸ್ಥೆ ತಿಳಿಸಿದೆ. * ಭಾರತೀಯ ಈ ಕೋರೋಣ ಲಸಿಕೆ ನೀಡಿಕೆಯಿಂದ ಬಡ ರಾಷ್ಟ್ರಗಳ ಮೇಲೆ ಹೆಚ್ಚು ಅನುಕೂಲವಾಗಿದೆ, ಮತ್ತು ಜನಗಳಲ್ಲಿನ ರೋಗದ ಭೀತಿಯನ್ನು ಕಡಿಮೆಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ. * ಭಾರತವು ಬೇರೆ ಬೇರೆ ದೇಶಗಳಿಗೆ ಸಾಮಾಜಿಕ ಕಳಕಳಿಯಿಂದ ಲಸಿಕೆಯನ್ನು ನೀಡಿದ್ದರಿಂದ ಪ್ರಸ್ತುತ 180ಕ್ಕೂ ಹೆಚ್ಚು ಯುಎನ್ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆದಿದೆ ಎಂದು ಯುಎನ್ ರಾಯಭಾರಿ ಭಾರತದ ಉಪ ಖಾಯಂ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ರವರು ತಿಳಿಸಿದರು. * ಪ್ರಸ್ತುತ ಭಾರತ ದೇಶವು ಕೋವಿಡ್-19 ಲಸಿಕೆಯನ್ನು ಜನರಿಗೆ ತಲುಪಿಸುವದರಲ್ಲಿ ಮುಂದೆಯಿದೆ. * ಸದ್ಯ ಭಾರತವು ದೇಶದ 300 ಮಿಲಿಯನ್ ಜನರಿಗೆ ಲಸಿಕೆಯನ್ನು ನೀಡಿದೆ, ಮತ್ತು ಸರಿ ಸುಮಾರು 70ಕ್ಕೂ ಅಧಿಕ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆ ಪೂರೈಸಿದೆ ಎಂದು ತಿಳಿದು ಬಂದಿದೆ.