Job Description: * ಬೆಂಗಳೂರು ನಗರದಲ್ಲಿನ ಮಲಿನಗಾಳಿಯನ್ನು ಅಥವಾ ವಾಯು ಮಾಲಿನ್ಯದಿಂದ ಕಲುಷಿತಗೊಂಡ ಗಾಳಿಯನ್ನು ಶುದ್ಧೀಕರಣ ಮಾಡಲು, ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್ ಅಪ್ ಕಂಪನಿಯು ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. * ಬೆಂಗಳೂರು ನಗರದ ಹಡ್ಸನ್ ವೃತ್ತದ ಬಳಿ ಕಲುಷಿತ ಗಾಳಿ ಶುದ್ಧೀಕರಿಸುವ ಯಂತ್ರವನ್ನು ಪ್ರಾಯೋಗಿಕವಾಗಿ ಪ್ರಯೋಗಿಸಲು ಅಳವಡಿಸಲಾಗಿದೆ. * ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್ ಅಪ್ ಕಂಪನಿಯು (Smog tower) ಸ್ಮೋಗ್ ಟವರ್ ಎಂಬ ಯಂತ್ರವನ್ನು ಅಭಿವೃದ್ಧಿಪಡಿಸಿದೆ, ಹಾಗೂ ಇದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯು ಸಹಕಾರ ನೀಡಿದೆ. * ಈ ಸ್ಮೋಗ್ ಟವರ್ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳತೆಯನ್ನು ಹೊಂದಿದೆ. * ಈ ಸ್ಮೋಗ್ ಟವರ್ ಯಂತ್ರವು ತನ್ನ ಕಾರ್ಯ ನಿರ್ವಹಿಸಲು ಒಂದು ಗಂಟೆಗೆ 11 ಕಿಲೋವಾಟ್ ವಿದ್ಯುತ್ ಬಳಸಿಕೊಳ್ಳುತ್ತದೆ, ಹಾಗೂ ಈ ಯಂತ್ರವನ್ನು ಸತತ 10 ಗಂಟೆಗಳ ಕಾಲ ಚಾಲನೆಯಲ್ಲಿ ಇಡಬಹುದಾಗಿದೆ.