Job Description: * ಬಾಂಗ್ಲಾದೇಶಕ್ಕೆ12 ಲಕ್ಷ ಕೋರೋಣ ಲಸಿಕೆ ಡೋಸ್ಗಳನ್ನು ಉಡುಗೊರೆಯಾಗಿ ನೀಡಿದ ಭಾರತ. * ಇತ್ತೀಚಿಗೆ ಪ್ರಧಾನಿ ಮೋದಿಯವರ ಬಾಂಗ್ಲಾದೇಶದ 2 ದಿನಗಳ ಪ್ರವಾಸದಲ್ಲಿ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಕೋರೋಣ ಲಸಿಕೆಗಳನ್ನೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮೋದಿಯವರು ನೀಡಿದರು. * ಇದೆ ಸಂದರ್ಭದಲ್ಲಿ 109 ಆಯಂಬುಲೆನ್ಸ್ಗಳ ಕೀಗಳನ್ನೂ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮೋದಿಜೀ ನೀಡಿದರು. * ಪ್ರಧಾನಿ ಮೋದಿ ಮತ್ತು ಬಾಂಗ್ಲಾ ಪ್ರಧಾನಿಯವರು ಎರಡು ದೇಶಗಳ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿ 5 ಒಪ್ಪಂದಗಳಿಗೆ ಸಹಿ ಹಾಕಿದರು. * ಮೋದಿ ಉದ್ಘಾಟಿಸಿದ ಹೊಸ ಪ್ರಯಾಣಿಕರ ರೈಲು 'ಮಿಟಾಲಿ ಎಕ್ಸ್ಪ್ರೆಸ್' ರೈಲು ತೆಜ್ಗಾಂವ್ನ ಪ್ರಧಾನ ಮಂತ್ರಿ ಕಚೇರಿಯಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಣೆ ಮಾಡಿದರು. * ಉಭಯ ರಾಷ್ಟ್ರಗಳ ನಡುವೆ ಚಲಿಸುವ ಮೈತ್ರೀ ಎಕ್ಸ್ಪ್ರೆಸ್, ಢಾಕಾ-ಕೊಲ್ಕತ್ತಾ ರೈಲು ಮತ್ತು ಬಂಧನ್ ಎಕ್ಸ್ಪ್ರೆಸ್, ಖುಲ್ನಾ-ಕೋಲ್ಕತಾ ರೈಲಿನ ನಂತರದ ಮೂರನೇ ಪ್ರಯಾಣಿಕ ರೈಲು ಇದಾಗಿದೆ.