Job Description: * ನಾರ್ವೆ ವಿಶ್ವದ ಮೊದಲ ಹಡಗು ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ತಯಾರಿನಡೆಸಿದೆ, ಹಾಗೂ ಈ ಸುರಂಗಮಾರ್ಗ ಯೋಜನೆಯ 2022ರಲ್ಲಿ ಆರಂಭವಾಗಿ ಸರಿ ಸುಮಾರು 2025-2026ರ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಾರ್ವೆ ತಿಳಿಸಿದೆ. * ನಾರ್ವೆ ಪರ್ವತಗಳ ಕೆಳಗೆ ಹಡಗು ಸುರಂಗವನ್ನು ನಿರ್ಮಿಸಲು ನಾರ್ವೆ ಚಿಂತನೆ ನಡೆಸಿದೆ. * ಈ ಸುರಂಗಮಾರ್ಗವು 37 ಮೀಟರ್ ಎತ್ತರ, 1,700 ಮೀಟರ್ ಉದ್ದ ಮತ್ತು 26.5 ಮೀಟರ್ ಅಗಲ ವಿಸ್ತೀರ್ಣ ಹೊಂದಿರಲಿದೆ ಎಂದು ತಿಳಿಸಿದೆ. * ಈ ಸುರಂಗಮಾರ್ಗವು ನಾರ್ವೆಯ ಸ್ಟ್ಯಾಧಾವೆಟ್ ಪರ್ಯಾಯ ದ್ವೀಪದ ಪರ್ವತಗಳ ಕೆಳಗೆ ಮಾಡಲಾಗುವದು ಎಂದು ತಿಳಿದು ಬಂದಿದೆ. * ಮೊದಲ ಬಾರಿಗೆ ಸುರಂಗ ಮಾರ್ಗವನ್ನು 2013 ರಲ್ಲಿ ರಾಷ್ಟ್ರೀಯ ಸಾರಿಗೆ ಯೋಜನೆಯಲ್ಲಿ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. * ನಾರ್ವೆ ಸಾರಿಗೆ ಮತ್ತು ಸಂವಹನ ಸಚಿವಾಲಯವು ಈ ಸುರಂಗಮಾರ್ಗದ ತಯಾರಿಯ ಸಿದ್ಧತೆಗಳಿಗೆ ಅನುಮೋದನೆ ನೀಡಿದೆ.