Job Description: * ದೆಹಲಿ ಕ್ಯಾಂಟ್ನಲ್ಲಿ ಭಾರತ - ದಕ್ಷಿಣ ಕೊರಿಯಾ ದ್ವಿಪಕ್ಷೀಯ ಸ್ನೇಹ ಉದ್ಯಾನವನವನ್ನು ಭಾರತದ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮತ್ತು ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸುಹ್ ವೂಕ್ ಅವರು ಉದ್ಘಾಟಿಸಿದ್ದಾರೆ. * 1950 ರಿಂದ 1953ರ ಕೊರಿಯನ್ ಯುದ್ಧದಲ್ಲಿ ಭಾರತೀಯ ಶಾಂತಿಪಾಲಕರ ಕೊಡುಗೆಯನ್ನು ಸ್ಮರಿಸಲು ಈ ಸ್ನೇಹ ಪಾರ್ಕ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ದಕ್ಷಿಣ ಕೊರಿಯಾದ 1950-1953ರ ಯುದ್ಧಗಳಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸಿಕೊಂಡಿತ್ತು. * ಭಾರತದ ಮೊದಲ ವಿದೇಶಾಂಗ ಕಾರ್ಯದರ್ಶಿ ಕೆ ಪಿ ಎಸ್ ಮೆನನ್ ದಕ್ಷಿಣ ಕೊರಿಯಾದಲ್ಲಿ ಚುನಾವಣೆಗಳನ್ನು ನೋಡಿಕೊಳ್ಳಲು ಸ್ಥಾಪಿಸಲಾದ ವಿಶ್ವಸಂಸ್ಥೆಯ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.