Job Description: * ಭಾರತದ 54 ಮೀನುಗಾರರನ್ನು ಶ್ರೀಲಂಕಾ ಸರ್ಕಾರವು ಬಂದಿಸಿತ್ತು ಇದೀಗ ಬಂಧಿತ ಮೀನುಗಾರರ ಪೈಕಿ 40 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಿಡುಗಡೆ ಮಾಡಿದೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಇನ್ನುಳಿದ ಪುದುಚೇರಿ ಮೂಲದ 14 ಮೀನುಗಾರರನ್ನು ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಕಾರಣವನ್ನು ಬಹಿರಂಗ ಪಡಿಸಿಲ್ಲ. * ಭಾರತ ದೇಶದ ಮೀನುಗಾರರು ತಮ್ಮ ಸರಹದ್ದನ್ನು ಮೀರಿ ಸಮುದ್ರದಲ್ಲಿ ಮೀನುಗಾರಿಕೆಯನ್ನು ಮಾಡುತಿದ್ದರು ಎನ್ನುವ ಆರೋಪದಿಂದಾಗಿ ಭಾರತದ 5ಬೋಟ್ ಮತ್ತು 54 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಶ್ರೀಲಂಕಾ ಸರ್ಕಾರ ಮಾಹಿತಿಯನ್ನು ನೀಡಿತ್ತು.