Job Description: * ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ 56 ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. * ದಕ್ಷಿಣ ಆಫ್ರಿಕಾ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ರಾಷ್ಟ್ರವಾಗಿ ಮೊದಲ ಸ್ಥಾನದಲ್ಲಿದೆ. * ಥಾಯ್ಲೆಂಡ್ ದೇಶವು ಅತೀ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಒಳಗೊಂಡು 2ನೇ ಸ್ಥಾನ ಹಾಗು ಅಮೆರಿಕ ದೇಶವು 3ನೇ ಸ್ಥಾನ ಪಡೆದಿದೆ. * ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವು 4ನೇ ಸ್ಥಾನ ಪಡೆದಿದೆ. ಜಗತ್ತಿನಲ್ಲೇ ಸುರಕ್ಷಿತ ಹಾಗೂ ಉತ್ತಮ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳು: * ನಾರ್ವೆ ದೇಶವು ಸುರಕ್ಷಿತ ಹಾಗೂ ಉತ್ತಮ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. * ಜಪಾನ್ ದೇಶವು 2ನೇ ಸ್ಥಾನ, ಸ್ವೀಡನ್ 3ನೇ ಸ್ಥಾನ ಪಡೆದುಕೊಂಡಿವೆ, ಎಂದು ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ ನೀಡಿರುವ ವರದಿ ಪ್ರಕಾರ ತಿಳಿದು ಬಂದಿದೆ.