Job Description: * ಕೇಂದ್ರ ಸರ್ಕಾರ ಇ-ಸಂಜೀವಿನಿ ಸೇವೆಗಳನ್ನು ಜಾರಿಗೆ ತಂದಿದೆ. * ಇ-ಸಂಜೀವಿನಿ ಸರ್ವೀಸ್ ನಿಂದ ಕೊರೋನಾ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಜನರಿಗೆ ವೈದ್ಯರ ಸಲಹೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಇ-ಸಂಜೀವಿನಿ ಸರ್ವಿಸ್ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. * ಇ-ಸಂಜೀವಿನಿ ಸರ್ವಿಸ್ ಮೂಲಕ ಜನರು ಮನೆಯಲ್ಲಿಯೆ ಕುಳಿತು ತಮ್ಮ ಅಂತರ್ಜಾಲ ಸಂಪರ್ಕವನ್ನು ಬಳಸಿಕೊಂಡು ಕಾಯಿಲೆಗಳಿಗೆ ವೈದ್ಯಕೀಯ ಸಲಹೆಗಳನ್ನು ಪಡೆಯಬಹುದಾಗಿದೆ. * ಇ-ಸಂಜೀವಿನಿ ಸರ್ವಿಸ್ ಎನ್ನುವದು ಒಂದು ಮೊಬೈಲ್ ಆಪ್ ಆಗಿದೆ ಇಅದನ್ನು ಸಾಮಾನ್ಯ ಜನರು ಈ ಆಪ್ ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.