Job Description: * ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ʼಗೆ ವೋಟರ್ ಐಡಿ ಜೋಡಣೆ ಮಾಡಲು ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ. * ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನ ಆಧಾರ್ʼನೊಂದಿಗೆ ಲಿಂಕ್ ಮಾಡಲು ಉದ್ದೇಶಿಸಲಾಗಿದೆ, ಇದರಿಂದ ಒಬ್ಬ ವ್ಯಕ್ತಿ ಬೇರೆ ಬೇರೆ ಚುನಾವಣೆ ಸ್ಥಳಗಳಲ್ಲಿ ಮತ ಹಾಕುವದನ್ನು ತಡೆಗಟ್ಟಬಹುದುಎಂದು ತಿಳಿಸಿದ್ದಾರೆ. * ಈ ಹಿಂದೆ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮತದಾರರ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಚುನಾವಣಾ ಆಯೋಗದ ಯೋಜನೆಗೆ 2015ರ ಆಗಸ್ಟ್ʼನಲ್ಲಿ, ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತ್ತು. ರವಿಶಂಕರ್ ಪ್ರಸಾದ್ ರವರ ಬಗ್ಗೆ ಮಾಹಿತಿ : * ಜನನ: 30 ಆಗಸ್ಟ್ 1954 ಪಾಟ್ನಾ * ರವಿಶಂಕರ್ ಪ್ರಸಾದ್ ಅವರು ಭಾರತೀಯ ವಕೀಲರಾಗಿದ್ದರು. * ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆಗಳನ್ನು ಹೊಂದಿರುವ ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ. * ಭಾರತೀಯ ಜನತಾ ಪಕ್ಷದ ಸದಸ್ಯ ಪ್ರಸಾದ್ ಅವರು ಪಾಟ್ನಾ ಸಾಹಿಬ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. * ಪಕ್ಷ: ಭಾರತೀಯ ಜನತಾ ಪಕ್ಷ * ಕಚೇರಿ: 2000 ರಿಂದ ರಾಜ್ಯಸಭಾ ಸದಸ್ಯ