Job Description: * ರಾಜಸ್ಥಾನ ಸರ್ಕಾರವು 120 ವರ್ಷ ಹಳೆಯ ಕಾಯಿದೆಯನ್ನುತಿದ್ದುಪಡಿ ಮಾಡಿದೆ. * ಈ ಕಾಯಿದೆ ಅನ್ವಯ ಹಿಂದುಳಿದ ವರ್ಗಗಳಿಗೆ ಸೇರಿದ ಖೈದಿಗಳನ್ನು ಅಡುಗೆ ಮಾಡಲು ಅವಕಾಶ ನೀಡದ ಕಾಯಿದೆಯಾಗಿತ್ತು. * ಈ ಕಾಯಿದೆಯನ್ನು ಬ್ರಿಟಿಷ್ ರಾಜ್ ಕಾಲದಲ್ಲಿ ಜಾರಿಗೆ ತರಲಾಗಿತ್ತು, ಇದರಿಂದ ಜೈಲುಗಳಲ್ಲಿರುವ ಖೈದಿಗಳಿಗೆ ಜಾತಿ ಆಧಾರದ ಮೇಲೆ ಕೆಲಸ ಹಂಚುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿತ್ತು, ಇದೀಗ ರಾಜಸ್ಥಾನ ಸರ್ಕಾರವು ಕಾಯಿದೆಯನ್ನು ಸರಿಪಡಿಸಿದೆ. * ಪ್ರಸ್ತುತ ರಾಜಸ್ಥಾನ ಕಾರಾಗೃಹಗಳ ಡಿಜಿ ಯಾಗಿರುವ ರಾಜೀವ್ ದಸೋತ್'ರವರು ಈ ಕಾಯಿದೆ ತಿದ್ದುಪಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ. * 1894ರಲ್ಲಿ ಈ ಕಾರಾಗೃಹ ಕಾಯಿದೆ ತರಲಾಗಿತ್ತು ಮತ್ತು ಇದು ರಾಜಸ್ಥಾನ ಕಾರಾಗೃಹಗಳ ನಿಯಮ, 1951ರ ಅಡಿಯಲ್ಲಿ ಯಥಾಸ್ಥಿತಿಯಲ್ಲಿ ಸಾಗುತಿತ್ತು. * ಕೇವಲ 20 ದಿನಗಳಲ್ಲಿ ಕಾಯಿದೆ ತಿದ್ದುಪಡಿಯನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್'ರವರು ಮಾಡಿದ್ದಾರೆ ಎಂದು ರಾಜೀವ್ ದಸೋತ್'ರವರು ತಿಳಿಸಿದರು. ರಾಜಸ್ಥಾನ ರಾಜ್ಯದ ಬಗ್ಗೆ ಮಾಹಿತಿ : * ರಾಜಸ್ಥಾನವು ಉತ್ತರ ಭಾರತದ ರಾಜ್ಯ ವಾಗಿದೆ. * ರಾಜಸ್ಥಾನದ ಒಟ್ಟು ವಿಸ್ತೀರ್ಣ 342,239 ಚದರ ಕಿಲೋಮೀಟರ್ ಅಥವಾ ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 10.4 ರಷ್ಟಿದೆ. * ಭಾರತದ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯ ಪ್ರಕಾರ ಏಳನೇ ಅತಿ ದೊಡ್ಡ ರಾಜ್ಯವಾಗಿದೆ. * ರಾಜಧಾನಿ : ಜೈಪುರ * ರಾಜ್ಯಪಾಲರು : ಕಲ್ರಾಜ್ ಮಿಶ್ರಾ * ಜನಸಂಖ್ಯೆ : 6.89 ಕೋಟಿ 2012ರ ಪ್ರಕಾರ