Job Description: * ಮಾರ್ಚ್ 15, 2021 ರಂದು ಸಾಗರ ಏಡ್ಸ್ ಟು ನ್ಯಾವಿಗೇಷನ್ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. * ಈ ನ್ಯಾವಿಗೇಷನ್ ಮಸೂದೆಯನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಮನ್ಸುಖ್ ಮಾಂಡವಿಯಾ ಅವರು ಲೋಕಸಭೆಯಲ್ಲಿ ಮಂಡಿಸಿದರು. * ಈ ನ್ಯಾವಿಗೇಷನ್ ಮಸೂದೆಯಿಂದ ಸಾಗರ ಉದ್ಯಮದ ಆಧುನಿಕ ಮತ್ತು ಸಮಕಾಲೀನ ಅಗತ್ಯತೆಗಳನ್ನು ಬದಲಾಯಿಸುವ ಸಲುವಾಗಿ ಹಡಗು ಸಚಿವಾಲಯವು ಪೂರ್ವಭಾವಿ ವಿಧಾನದ ಒಂದು ಭಾಗವನ್ನು ಅಳವಡಿಸಿಕೊಂಡದೆ. * 2021ರ ಈ ಮೆರೈನ್ ಏಡ್ಸ್ ಟು ನ್ಯಾವಿಗೇಷನ್ ಬಿಲ್ ನಿಂದಾಗಿ ಹಡಗು ಸಂಚಾರ ಸೇವೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಮಸೂದೆ ಹೊಸ ಚೌಕಟ್ಟನ್ನು ನೀಡಲು ಸಹಾಯ ಮಾಡುತ್ತದೆ. * ನ್ಯಾವಿಗೇಷನ್ನಲ್ಲಿ ಆಧುನಿಕ ರೂಪಗಳ ಸಹಾಯದ ಬಳಕೆಯನ್ನು ಸಕ್ರಿಯಗೊಳಿಸುವ ಸಲುವಾಗಿ 'ಲೈಟ್ಹೌಸ್' ಬದಲಿಗೆ, ನ್ಯಾವಿಗೇಷನ್ಗೆ ಸಾಗರ ಸಾಧನಗಳು ಎಂಬ ಪದವನ್ನು ಬಳಸಲು ಇದು ಸಹಾಯಮಾಡಲಿದೆ. * ಈ ಮಸೂದೆಯು ಒಂಬತ್ತು ದಶಕಗಳಷ್ಟು ಹಳೆಯದಾದ ಕಾನೂನನ್ನು ಬದಲಾಯಿಸಲು ಸಹಾಯಮಾಡುತ್ತದೆ. * ಪಾರಂಪರಿಕ ದೀಪಸ್ತಂಭಗಳನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಮಸೂದೆಯಿಂದ ಅನುಕೂಲವಾಗಲಿದೆ. * ಈ ಮಸೂದೆಯುನ್ನು 1927ರ ವಸಾಹತುಶಾಹಿ ಲೈಟ್ಹೌಸ್ ಕಾಯ್ದೆಯನ್ನು ರದ್ದುಗೊಳಿಸುವ ಸಲುವಾಗಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಪರಿಚಯಿಸಲಾಯಿತು.