Job Description: * ಖ್ಯಾತ ವರ್ಣಚಿತ್ರಕಾರ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ್ ಪೈ ರವರು ಇತ್ತೀಚಿಗೆ ತಮ್ಮ 95ನೇ ವಯಸ್ಸಿನಲ್ಲಿ ವಿಧಿವಶರಾದರು. * ಲಕ್ಷ್ಮಣ್ ಪೈ ಅವರು 1926ರಲ್ಲಿ ಗೋವಾದಲ್ಲಿ ಜನಿಸಿದ್ದರು ಇವರಿಗೆ ಪದ್ಮಭೂಷಣ್, ಪದ್ಮಶ್ರೀ, ನೆಹರೂ ಪ್ರಶಸ್ತಿ ಮತ್ತು ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹೀಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿದೆ. * ಕಲಾ ಕ್ಷೇತ್ರದಲ್ಲಿ ಇವರು ನೀಡಿದ ಕೊಡುಗೆಯನ್ನು ಸದಾ ನೆನಪಿಸಿಕೊಳ್ಳುತ್ತೇವೆ, ಮತ್ತು ಅವರ ನಿಧನಕ್ಕೆ ವಿಷಾದಿಸುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವೀಟ್ ಮೂಲಕ ತಿಳಿಸಿದ್ದಾರೆ.