Job Description: * ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್'ರವರು ಪ್ರಸ್ತುತ ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವುದಿಲ್ಲ ಎಂದು ಲೋಕಸಭೆಯಲ್ಲಿ ತಿಳಿಸಿದರು. * ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ಮತ್ತು ನೈಸರ್ಗಿಕ ಅನಿಲವನ್ನು GST ವ್ಯಾಪ್ತಿಗೆ ತರಲಾಗುವದಿಲ್ಲ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ನಿರ್ಮಲಾ ಸೀತಾರಾಮನ್'ರವರು ತಿಳಿಸಿದರು. * ರಾಜ್ಯಗಳ ಜಿಎಸ್ಟಿ ಮಂಡಳಿಯು ಇದುವರೆಗೆ ಈ ಕಚ್ಚಾ ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಶಿಫಾರಸ್ಸು ಮಾಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿಯನ್ನು ತಿಳಿಸಿದರು. * ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್'ರವರು ನೀಡಿದ ಮಾಹಿತಿ ಪ್ರಕಾರ ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 19.98 ರೂಪಾಯಿಗಳಷ್ಟುತ್ತು, ಪ್ರಸ್ತುತ ಈ ವರ್ಷ ಅದು 32.9 ರೂಪಾಯಿಗಳಾಗಿದೆ ಎಂಬ ಮಾಹಿತಿ ನೀಡಿದ್ದಾರೆ. * ಡೀಸೆಲ್ ಮೇಲಿನ ಅಬಕಾರಿ ಸುಂಕ ಕಳೆದ ವರ್ಷ 15.83 ರೂಪಾಯಿಗಳಷ್ಟುತ್ತು, ಪ್ರಸ್ತುತ ಈ ವರ್ಷ 31.8 ರೂಪಾಯಿ ಆಗಿದೆ ಎಂದು ತಿಳಿಸಿದ್ದಾರೆ.