Job Description: * ಕೇಂದ್ರ ಸರ್ಕಾರ 2019 ರಿಂದ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಲೋಕಸಭೆಗೆ ಮಾಹಿತಿ ನೀಡಿದೆ. * ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ರವರು 2000 ರೂಪಾಯಿ ಮುಖಬೆಲೆಯ ನೋಟು ಮುದ್ರಿಸಿಲ್ಲ ಎಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. * 2021 ಫೆಬ್ರವರಿ 26ರ ಹೊತ್ತಿಗೆ 2000 ರೂ. ಮುಖಬೆಲೆಯ 2499 ಮಿಲಿಯನ್ ನೋಟುಗಳು ಚಲಾವಣೆಯಲ್ಲಿವೆ. * ಹೆಚ್ಚಿನ ಮೊತ್ತದ ಕರೆನ್ಸಿ ಸಂಗ್ರಹಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಕಪ್ಪು ಹಣ ಹಾಗೂ ನಕಲಿ ನೋಟು ತಡೆಯುವ ಉದ್ದೇಶದಿಂದ 2016 ರ ನವೆಂಬರ್ ನಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದು 2000 ರೂ. ಜೊತೆಗೆ ಬೇರೆ ಬೇರೆ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು.