Job Description: * ಮಾರ್ಚ್ 12, 2021ರಂದು ಕೇಂದ್ರ ಸರ್ಕಾರವು ದೇಶದಲ್ಲಿ 'ಮೇರಾ ರೇಷನ್ ಮೊಬೈಲ್ ಅಪ್ಲಿಕೇಶನ್' ಆರಂಭಿಸಿದೆ. * ಕೇಂದ್ರ ಸರ್ಕಾರವು ಒನ್ ನೇಷನ್-ಒನ್ ರೇಷನ್ ಕಾರ್ಡ್ ವ್ಯವಸ್ಥೆಗೆ ಸಹಾಯವಾಗುವಂತೆ ಈ ಅಪ್ಲಿಕೇಶನ್'ಅನ್ನು ಅಭಿವೃದ್ಧಿ ಪಡಿಸಿ ಪ್ರಾರಂಭ ಮಾಡಿದೆ. * ಕೇಂದ್ರ ಸರ್ಕಾರವು ಈ ಅಪ್ಲಿಕೇಶನ್'ನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. * ಬರುವ ದಿನಗಳಲ್ಲಿ ಮೊಬೈಲ್ ಅಪ್ಲಿಕೇಶನ್ 14 ಭಾಷೆಗಳಲ್ಲಿ ಪ್ರಾರಂಭಿಸಲಾಗುವುದು, ಸದ್ಯ ಇದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. * ವಲಸೆ ಜನರು ಹೋಗುವ ಸ್ಥಳಗಳ ಆಧಾರದ ಮೇಲೆ ಭಾಷೆಗಳನ್ನು ಗುರುತಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. * ಒನ್ ನೇಷನ್-ಒನ್ ರೇಷನ್ ಕಾರ್ಡ್ ವ್ಯವಸ್ಥೆಯು ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. * ಒನ್ ನೇಷನ್-ಒನ್ ರೇಷನ್ ಕಾರ್ಡ್ ವ್ಯವಸ್ಥೆಯು ಪ್ರಯೋಜನಗಳನ್ನು ದೇಶಾದ್ಯಂತದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಬಹುದು. * ಆಗಸ್ಟ್ 2019 ರಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡ್ ವ್ಯವಸ್ಥೆಯುನ್ನು ಆರಂಭ ಮಾಡಲಾಗಿತ್ತು.