Job Description: * ಮಾರ್ಚ್ 13, 2021ರಂದು ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ 3 ದಿನಗಳ ಕಾಲ "ಕಲನಮಕ್ ಅಕ್ಕಿ ಉತ್ಸವ"ವನ್ನು ಉತ್ತರ ಪ್ರದೇಶ ಸರ್ಕಾರವು ಆಯೋಜಿಸಿದೆ. * ಝಾನ್ಸಿ'ಯಲ್ಲಿ ಸ್ಟ್ರಾಬೆರಿ ಉತ್ಸವ ಮತ್ತು ಲಕ್ನೋದಲ್ಲಿ ಬೆಲ್ಲದ ಉತ್ಸವ'ದ ಅದ್ಭುತ ಯಶಸ್ಸಿನ ನಂತರ ಈ ಉತ್ಸವವನ್ನು ಆಯೋಜಿಸಲಾಗಿದೆ. * ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ರವರು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರಿಗೆ ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ಉತ್ಸವವನ್ನು ಮಾರ್ಚ್ 13 ರಂದು ಉದ್ಘಾಟಣೆ ಮಾಡಿದರು. * ಆತ್ಮನಿರ್ಭಾರ ಭಾರತ್ ಅಭಿಯಾನ್ ಹಾಗೂ ಲೋಕಲ್ ಫಾರ್ ವೋಕಲ್(Local for Vocal) ಅಭಿಯಾನದ ಅಡಿಯಲ್ಲಿ One District One Product ಎಂದು ಉತ್ತೇಜಿಸಲು, ಮಾರಾಟ ಮಾಡಲು ಅಕ್ಕಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. * ಕಲಾನಮಕ್ ಅಕ್ಕಿಯನ್ನು ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಮತ್ತು ಇದು ಪೂರ್ವ ಯುಪಿಯ ಕೆಲವು ಜಿಲ್ಲೆಗಳ ಒಂದು ಉತ್ಪನ್ನವಾಗಿದೆ. * ಕಲಾನಮಕ್ ಅಕ್ಕಿ ಉತ್ಸವವು ಪ್ರಗತಿಪರ ರೈತರು ಮತ್ತು ಸ್ವ-ಸಹಾಯ ಗುಂಪುಗಳಿಗೆ ಕೃಷಿ ಉತ್ಪನ್ನದ ಮತ್ತು ಸಂಸ್ಕರಣೆಗೆ ಬಗ್ಗೆ ಮಾಹಿತಿಯನ್ನು ನೀಡಲಿದೆ ಎಂದು UP ಸರ್ಕಾರ ತಿಳಿಸಿದೆ.