Job Description: * ಅಮೆರಿಕಾದ ಶ್ರೇಷ್ಠ ಬಾಕ್ಸರ್ ಮರ್ವಿನ್ ಹೆಗ್ಲರ್ ಇತ್ತೀಚಿಗೆ ನಿಧನರಾಗಿದ್ದಾರೆ ಎಂದು ಅವರ ಪತ್ನಿ ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಮಾಹಿತಿ ನೀಡಿದ್ದಾರೆ. * ಬಾಕ್ಸಿಂಗ್ ಇತಿಹಾಸದಲ್ಲಿ ಶ್ರೇಷ್ಠ ಮಿಡಲ್ ವೇಟ್ ಬಾಕ್ಸರ್'ಗಳಲ್ಲಿ ಒಬ್ಬರಾದ ಮರ್ವಿನ್ ಹೆಗ್ಲರ್ ಅವರು ತಮ್ಮ 66 ವರ್ಷ ವಯಸ್ಸಿನಲ್ಲಿ ನಿಧನರಾದರು. * ಮರ್ವಿನ್ ಹೆಗ್ಲರ್ 1973 ರಿಂದ 1987 ರವರೆಗೆ ಬಾಕ್ಸಿಂಗ್ ಆಟದ ಸಮಯದಲ್ಲಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. * ಹೆಗ್ಲರ್ ರವರು 2 ಪಂದ್ಯ ಡ್ರಾ ಮತ್ತು 52 ಪಂದ್ಯಗಳ ನಾಕೌಟ್ಗಳೊಂದಿಗೆ 62–3 ಪಂದ್ಯಗಳ ದಾಖಲೆಯನ್ನು ಮಾಡಿದ್ದಾರೆ. * 1985 ರಲ್ಲಿ ಸೀಸರ್ ಅರಮನೆಯಲ್ಲಿ ಕೇವಲ 8 ನಿಮಿಷಗಳ ಕಾಲ ಆಡಿದ ಪಂದ್ಯ ಇಲ್ಲಿಯವರೆಗಿನೇ ಅತ್ಯಂತ ಶ್ರೇಷ್ಠ ಪಂದ್ಯವಾಗಿದೆ, ಈ ಪಂದ್ಯವು ಥಾಮಸ್ ‘ಹಿಟ್ಮ್ಯಾನ್’ ಹರ್ನ್ಸ್ ವಿರುದ್ಧ ಆಡಿದ ಪಂದ್ಯ ಇದಾಗಿದೆ. * 1987 ರಲ್ಲಿ ಹೆಗ್ಲರ್ ತಮ್ಮ ಬಾಕ್ಸಿಂಗ್ ವೃತ್ತಿಜೀವನಕ್ಕೆ ವಿದಾಯ ತಿಳಿಸಿದ್ದರು.