Job Description: * ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ಭದ್ರತೆ ಕಾರಣದಿಂದಾಗಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಮುಂದಾಗಿದೆ ಜೊತೆಗೆ 1,000ಕ್ಕೂ ಹೆಚ್ಚು ಮದರಸಾಗಳನ್ನು ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ನೀಡಿರುವ ಮಾಹಿತಿ ಪ್ರಕಾರ ಬುರ್ಖಾ ನಿಷೇದ ವಿಷಯದ ಪ್ರಸ್ತಾವನೆಗೆ ಸಹಿ ಹಾಕಲಾಗಿದೆ ಮತ್ತು ಇದನ್ನು ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ. * ಪ್ರಸ್ತುತ ಶ್ರೀಲಂಕಾ ದೇಶದಲ್ಲಿ 1000ಕ್ಕೂ ಹೆಚ್ಚು ಮದರಸಾಗಳನ್ನು ಹೊಂದಿದೆ, ಆದರೆ ಇದೀಗ ಈ ಮದರಸಾಗಳು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಕಾರ್ಯ ನಿರ್ವಹಿಸುತ್ತಿಲ್ಲ, ಮತ್ತು ಪ್ರಾಧಿಕಾರದಲ್ಲಿ ಸರಿಯಾದ ನೋಂದಣಿಯನ್ನೂ ಮಾಡಿಲ್ಲ ಎಂದು ಮದರಸಾಗಳನ್ನು ಮುಚ್ಚಲಾಗುವದು ಎಂದು ತಿಳಿಸಿದ್ದಾರೆ. * ಈ ಮೊದಲು ಶ್ರೀಲಂಕಾದ ಈಸ್ಟರ್ ದಿನ ಚರ್ಚ್ ಮತ್ತು ಹೋಟೆಲ್ಗಳ ಮೇಲೆ 2019ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ 260ಕ್ಕೂ ಅಧಿಕ ಜನರು ಸಾವನ್ನಪಿದ್ದರು, ಈ ಕಾರಣದಿಂದಾಗಿ ಬುರ್ಖಾ ಧರಿಸುವುದನ್ನು ಶ್ರೀಲಂಕಾ ಸರ್ಕಾರ ತಾತ್ಕಾಲಿಕವಾಗಿ ನಿಷೇದ ಹೇರಿತ್ತು, ಇದೀಗ ಸಂಪೂರ್ಣ ಬುರ್ಖಾ ನಿಷೇಧಿಸಲು ಮುಂದಾಗಿದೆ.