Job Description: * 2021ರ ಏಪ್ರಿಲ್ ತಿಂಗಳಲ್ಲಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. * ಈ ಹಿಂದೆ ಇವರು ಜನೇವರಿ 2021ರ ಭಾರತದ ಗಣರಾಜ್ಯೋತ್ಸವದ ಆಚರಣೆಗೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಬೇಕಿತ್ತು ಆದರೆ COVID-19 ಹಿನ್ನಲೆಯಿಂದಾಗಿ ಇವರು ಭೇಟಿಯನ್ನು ರದ್ದುಗೊಳಿಸಿದ್ದರು. * ಈ ಬ್ರಿಟನ್ ಪ್ರಧಾನ ಮಂತ್ರಿಯ ಭೇಟಿಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಸಹಾಯಮಾಡುತ್ತದೆ. * ಇಂಡೋ-ಪೆಸಿಫಿಕ್ ಪ್ರದೇಶವನ್ನು ವಿಶ್ವದ ಭೌಗೋಳಿಕ ರಾಜಕೀಯ ಕೇಂದ್ರವಾಗಿದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. * ದಕ್ಷಿಣ ಚೀನಾ ಸಮುದ್ರದ ಪ್ರದೇಶಗಳಲ್ಲಿ ಕ್ವೀನ್ ಎಲಿಜಬೆತ್ ವಿಮಾನವಾಹಕ ನೌಕೆ ಎಂದು ಕರೆಯಲ್ಪಡುವ ಬ್ರಿಟಿಷ್ ವಿಮಾನಗಳನ್ನು ನಿಯೋಜಿಸಲಾಗುವದು ಎಂದು ತಿಳಿಸಿದೆ. * ರಕ್ಷಣಾ ಮತ್ತು ವಿದೇಶಾಂಗ ನೀತಿಯ ಆದ್ಯತೆಗಳನ್ನು ತಿಳಿಸುತ್ತದೆ ಎಂದು ಯುಕೆ ತಿಳಿಸಿದೆ.