Job Description: * ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ 'ದುಡಿಯೋಣ-ಬಾ' ಅಭಿಯಾನವನ್ನು ಇದೆ ಮಾರ್ಚ್15ರಿಂದ ಮುಂದಿನ ಮೂರೂ ತಿಂಗಳವರೆಗೂ ಪ್ರಾರಂಭ ಮಾಡಲಿದೆ, ಇದು ಜನರ ವಲಸೆ ಹೋಗುವದನ್ನು ತಡೆಗಟ್ಟುವ ಮುಖ್ಯ ಉದ್ದೇಶವಾಗಿದೆ. * ಈ ಅಭಿಯಾನವು ಮೂರು ತಿಂಗಳುಗಳ ಕಾಲ ನರೇಗಾದಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. * ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸವನ್ನು ನೀಡುವ ಉದ್ದೇಶ ಇದಾಗಿದೆ. * ದುಡಿಯೋಣ-ಬಾ' ಅಭಿಯಾನವು ವರ್ಷದಲ್ಲಿ ಕನಿಷ್ಠ 100 ದಿನಗಳ ಕಾಲ ಬಡ ಕುಟುಂಬದ ಸಾಮಾನ್ಯ ಜನರಿಗೆ ಕೆಲಸ ಒದಗಿಸಿಕೊಡುವ ಉದ್ದೇಶದಿಂದ ಆರಂಭಗೊಳ್ಳುತ್ತಿದೆ. * ಈ ಅಭಿಯಾನವು ಮೊದಲ ಹಂತದಲ್ಲಿ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸುತ್ತದೆ, ನಂತರ ಉದ್ಯೋಗ ಚೀಟಿಗಳನ್ನೂ ನೀಡಲಾಗುತ್ತದೆ ಮತ್ತು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರ ಹೆಸರು ನೋಂದಣಿ ಮತ್ತು ಇದಾದ ಎರಡೇ ದಿನಗಳಲ್ಲಿ ಅವರಿಗೆ ಕೆಲಸ ನೀಡಲು ನಿರ್ಧರಿಸಲಾಗಿದೆ. * ಇದೀಗ ದುಡಿಯೋಣ -ಬಾ ಅಭಿಯಾನದಿಂದ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಕೆಲಸ ಕಾರ್ಯ ಇಲ್ಲದ ಜನರಿಗೆ ಜೀವನ ನಡೆಸಲು ಈ ಯೋಜನೆಯಿಂದ ಸಹಾಯವಾಗಲಿದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ.