Job Description: * ಮಾರ್ಚ್ 12, 2021 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) RH-560 ಎಂಬ ಧ್ವನಿ (ಸೌಂಡಿಂಗ್) ರಾಕೆಟ್ ಉಡಾವಣೆ ಮಾಡಿತು. * ಈ ಸೌಂಡಿಂಗ್ ರಾಕೆಟ್'ನಿಂದ ತಟಸ್ಥ ಗಾಳಿ ಮತ್ತು ಪ್ಲಾಸ್ಮಾ ಡೈನಾಮಿಕ್ಸ್ನಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡುವ ಸಲುವಾಗಿ ರಾಕೆಟ್ ಉಡಾವಣೆ ಮಾಡಲಾಗಿದೆ. * ಈ ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶ್ರೀಹರಿಕೋಟ ಶ್ರೇಣಿನಿಂದ ಉಡಾವಣೆ ಮಾಡಲಾಯಿತು. * ಈ ರಾಕೆಟ್ಗಳನ್ನು ಮೇಲಿನ ವಾತಾವರಣದ ಪ್ರದೇಶಗಳನ್ನು ಮಾಹಿತಿ ಪಡೆಯಲು ಮತ್ತು ಬಾಹ್ಯಾಕಾಶ ಸಂಶೋಧನೆ ನಡೆಸಲು ಬಳಸಲಾಗುತ್ತದೆ. * ಇಸ್ರೋ 1965 ರಿಂದ ದೇಶೀಯವಾಗಿ ತಯಾರಿಸಿದ ಸೌಂಡಿಂಗ್ ರಾಕೆಟ್ಗಳನ್ನು ಉಡಾವಣೆ ಮಾಡಲು ಪ್ರಾರಂಭಿಸಿದೆ. * ಇಸ್ರೋ ಮಾರ್ಚ್ 28, 2021 ರಂದು ಗಿಸಾಟ್ -1 ಎಂಬ ಭೂ ವೀಕ್ಷಣಾ ಉಪಗ್ರಹವನ್ನು ಉಡಾಯಿಸಲು ಸಿದ್ಧವಾಗಿದೆ, ಈ ಉಪಗ್ರಹ ಗಡಿಗಳ ನೈಜ-ಸಮಯದ ಚಿತ್ರಗಳನ್ನು, ಮತ್ತು ನೈಸರ್ಗಿಕ ವಿಪತ್ತುಗಳ ಮಾಹಿತಿಯನ್ನು ನೀಡುತ್ತದೆ ಎಂದು ತಿಳಿಸಿದೆ. * ಈ ಹಿಂದೆ ಇಸ್ರೋ ಫೆಬ್ರವರಿ 2021ರಲ್ಲಿ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಮೊದಲ ವಾಣಿಜ್ಯ ಮಿಷನ್ ಆಗಿರುವ ಬಾಹ್ಯಾಕಾಶ ಸಂಸ್ಥೆ ಬ್ರೆಜಿಲ್ನ ಅಮೆಜೋನಿಯಾ -1 ಎಂಬ ಪ್ರಾಥಮಿಕ ಉಪಗ್ರಹದೊಂದಿಗೆ 18 ಸಹ-ಪ್ರಯಾಣಿಕರ ಉಪಗ್ರಹಗಳೊಂದಿಗೆ ಶ್ರೀಹರಿಕೋಟ ಬಾಹ್ಯಾಕಾಶದಿಂದ ಉಡಾವಣೆ ಮಾಡಿದೆ.