Job Description: * ಏಷ್ಯಾದ್ಯಂತ ಮತ್ತು ಇಂಡೊ-ಪೆಸಿಫಿಕ್ ವಲಯದಲ್ಲಿ 1 ಬಿಲಿಯನ್ ಕೋವಿಡ್ -19 ಲಸಿಕೆಗಳನ್ನು ಕಳುಹಿಸುವ ಸಲುವಾಗಿ ಯುನೈಟೆಡ್ ಸ್ಟೇಟ್ಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ನಾಯಕರು ಹಣಕಾಸು ಸಂಗ್ರಹ, ಸಾಮರ್ಥ್ಯ ಮತ್ತು ವಿತರಣೆಗೆ ಒಪ್ಪಿರುವುದಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಈ ಕ್ವಾಡ್ (QUAD) ಗುಂಪಿನ ನಾಲ್ಕು ದೇಶಗಳಲ್ಲಿ, ಭಾರತವು ವಿಶ್ವದಾದ್ಯಂತ ಅತಿದೊಡ್ಡ ಲಸಿಕೆ ತಯಾರಕ ರಾಷ್ಟ್ರವಾಗಿದೆ. * ಭಾರತವು ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಲಾಗಿದೆ. * ಈ ಕ್ವಾಡ್ ಒಪ್ಪಂದದಿಂದ ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಭಾರತ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಬಳಸಲಿದೆ. * ಕೋವಿಡ್-19 ಲಸಿಕೆ ತಯಾರಿಕೆಗೆ ಯು.ಎಸ್. ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ಜಪಾನ್ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್, ಹಾಗೂ ಆಸ್ಟ್ರೇಲಿಯಾ ತರಬೇತಿಗೆ ಹಣಕಾಸು ನೀಡಲಿವೆ. * ಕ್ವಾಡ್ ಒಪ್ಪಂದವು ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಹಿಂದೂ ಮಹಾಸಾಗರದಾದ್ಯಂತದ ದೇಶಗಳಲ್ಲಿ ಲಸಿಕೆಗಳನ್ನು ವಿತರಿಸಲು ದೇಶವು ಬೆಂಬಲವನ್ನು ನೀಡುತ್ತದೆ.