Job Description: * ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಾರ್ಚ್ 12 ರಂದು ಗುಜರಾತಿನ ಸಾಬರಮತಿ ಆಶ್ರಮದಲ್ಲಿ ಅಮೃತ್ ಮಹೋತ್ಸವಕ್ಕೆ ಚಾಲನೆ ನೀಡಿದರು. * 75ನೇ ವರ್ಷದ ಅಮೃತ್ ಮಹೋತ್ಸವ್ 2023ರ ಆಗಸ್ಟ್ 15ರವರೆಗೆ ಸಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. * ಮಾರ್ಚ್ 12, 75ನೇ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಮೊದಲ ದಿನವಾಗಿದೆ. * ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್'ನ ಆಜಾದಿ ಕಾ ಅಮೃತ್ ಮಹೋತ್ಸವ್'ಗೆ ಚಾಲನೆ ನೀಡುವ ಮೂಲಕ 2022ರ ಆಗಸ್ಟ್ 15ಕ್ಕೂ ಮೊದಲೇ ಅಂದರೆ 75 ವಾರಗಳ ಮುನ್ನವೇ ಈ ಮಹೋತ್ಸವ ಪ್ರಾರಂಭವಾಗಿದೆ ಇದು 2023ರ ಆಗಸ್ಟ್ 15ರವರೆಗೂ ನಡೆಯಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.